ಮೂಡಂಬೈಲು ಸರಕಾರಿ ಪ್ರೌಢಶಾಲೆಗೆ ಶತಮಾನೋತ್ಸವ: ವರ್ಷವಿಡೀ ನಡೆಯುವ ಶತಮಾನಾಚರಣೆಗೆ ಡಿ.1ರಂದು ನಾಂದಿ

by Narayan Chambaltimar

ಮಂಜೇಶ್ವರ : ಮೂಡಂಬೈಲು ಸರಕಾರಿ ಪ್ರೌಡ ಶಾಲೆಯು 2024-25ನೇ ಸಾಲಿನಲ್ಲಿ ಶತಮಾನೋತ್ಸವ ವರ್ಷಾಚರಣೆಯನ್ನು ವರ್ಷವಿಡೀ ಆಚರಿಸಲಿದೆ. ಇದರ ಉದ್ಘಾಟನಾ ಸಮಾರಂಭವು ಡಿಸೆಂಬರ್ 1 ರಂದು ಬೆಳಿಗ್ಗೆ 10.30ಕ್ಕೆ ಜರಗಲಿದೆ.
ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಅಕ್ಷರ ಸಂತ ಹರೇಕಳ‌ ಹಾಜಬ್ಬರವರು ಶತಮಾನೋತ್ಸವ ವರ್ಷಾಚರಣೆಯನ್ನು ಉದ್ಘಾಟಿಸಲಿದ್ದರೆ.

ಮುಖ್ಯ ಅತಿಥಿಗಳಾಗಿ ಸರಕಾರಿ ಕಾಲೇಜು ಕಾಸರಗೋಡಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ,ಕಾಸರಗೋಡು ಜಿ.ಪಂಚಾಯತ್ ಸದಸ್ಯೆಯಾದ ಕಮಲಾಕ್ಷಿ ಕೆ., ಮೀಂಜ ಪಂಚಾಯತ್ ನ ಉಪಾಧ್ಯಕ್ಷರಾದ ಜಯರಾಮ ಬಲ್ಲಂಗುಡೇಲು,ಮಂಜೇಶ್ವರ ಬ್ಲಾಕ್ ಪಂ.ಸದಸ್ಯೆ ಅಶ್ವಿನಿ ಎಂ.ಎಲ್,ಕಾಸರಗೋಡು ಶಾಲ ಶಿಕ್ಷಣಾಧಿಕಾರಿಗಳಾದ ದಿನೇಶ್ ವಿ.,ಮಂಜೇಶ್ವರ ಸಹಾಯಕ ಶಿಕ್ಷಣಾಧಿಕಾರಿಗಳಾದ ರಾಜಗೋಪಾಲ,ಮಂಜೇಶ್ವರ ಬ್ಲಾಕ್ ಯೋಜನ ಸಂಯೋಜಕರು ಜಾಯ್ ಜಿ.,ಶಾಲಾ ಬೆಂಬಲ ಸಮಿತಿಯ ಅಧ್ಯಕ್ಷರಾದ ಶಿವರಾಮ ಪದಕಣ್ಣಾಯ ಪಾಲ್ಗೊಳ್ಳಲಿದ್ದರೆ.ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ಲ ಪಜಿಂಗಾರು,ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾ ರಾಮ್ ಪ್ರಕಾಶ್ ಆಳ್ವ,ಮಾತೆಯರ ಸಂಘದ ಅಧ್ಯಕ್ಷರಾದ ಸುಮಿತಾ ಎ.ಎಸ್ ಉಪಸ್ಥಿತರಿರುವರು.ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನ್ಯಾ.ಎಂ.ದಾಮೋದರ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದರೆ.ಶಾಲಾ ಮುಖ್ಯೋಪಾಧ್ಯಯರಾದ ಜಾರ್ಜ್ ಕ್ರಾಸ್ತ ಸಿ.ಎಚ್ ಸ್ವಾಗತಿಸಲಿದ್ದರೆ ಹಾಗೂ ಸಭಾ ಕಾರ್ಯಕ್ರಮದ ನಂತರ ಶಾಲಾ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಾಟನೆಯಲ್ಲಿ ತಿಳಿಸಿದ್ದರೆ

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00