ಮಾನ್ಯ- ಮಾನ್ಯದ ದಿ.ರವೀಂದ್ರ ಮಾಸ್ಟರ್ ರವರ ದ್ವಿತೀಯ ಪುತ್ರ ಸುಬ್ರಮಣ್ಯ ಆರ್ (44 ) ನಿನ್ನೆ ಮಧ್ಯಾಹ್ನ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಿನ್ನೆ ಮುಂಜಾನೆ ಕಾಣಿಸಿಕೊಂಡ ಅಸೌಖ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮದ್ಯಾಹ್ನ ನಿಧನ ಹೊಂದಿದರು.
ಮೃತರು ಪುತ್ರ ಚಂದ್ರಮೌಳಿ ,ತಾಯಿ ಚಂದ್ರಾವತಿ ,ಸಹೋದರ ಹಾಗು ಪ್ರಸ್ತುತ ಜ್ಞಾನೋದಯ ಶಾಲೆಯ ಆಡಳಿತ ವ್ಯವಸ್ಥಾಪಕ ನಿತ್ಯಾನಂದ ಆರ್ , ಸಹೋದರಿ ಪೂರ್ಣಿಮಾ ನಾರಾಯಣ್ಮ ಉಡುಪಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪತ್ನಿ ಚಂದ್ರಮ್ಮ ಈ ಹಿಂದೆಯೇ ನಿಧನರಾಗಿದ್ದರು
ಇವರು ಎಳವೆಯಿಂದಲೇ ಸಮಾಜಮುಖಿ ಕಾರ್ಯಗಳಲ್ಲಿ ,ಕ್ರೀಡಾರಂಗದಲ್ಲಿ ಸಕ್ರಿಯ ರಾಗಿದ್ದು ಮಾನ್ಯದ ಸಾಮ್ರಾಟ್ ಸಂಸ್ಥೆಯ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರರಾಗಿದ್ದರು. ಸಾಮ್ರಾಟ್ ಸಂಸ್ಥೆಯ ಏಳಿಗೆ ಹಾಗು ಯಶಸ್ಸಿಗೆ ಮೃತರು ಆಹೋರಾತ್ರಿ ಶ್ರಮಿಸಿದ್ದರು. ಯಕ್ಷಗಾನ ಕಲೆಯ ಬಹು ದೊಡ್ಡ ಅಭಿಮಾನಿಯಾಗಿದ್ದ ಇವರು ಮಾನ್ಯದ ಹೆಚ್ಚಿನ ಎಲ್ಲಾಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣ ಸಹಕಾರ ನೀಡುತಿದ್ದರು. ಯಕ್ಷಗಾನದ ತೆಂಕು ಹಾಗೂ ಬಡಗುತಿಟ್ಟಿನ ಮಾನ್ಯದಲ್ಲಿ ಜರಗತಿದ್ದ ಸರಣಿ ಪ್ರದರ್ಶನಗಳ ಯಶಸ್ಸಿನಲ್ಲಿ ಇವರದು ಸಿಂಹ ಪಾಲು ಇತ್ತು. ಇವರ ಅಕಾಲಿಕ ಮರಣಕ್ಕೆ ಮಾನ್ಯದ ಯುವ ಜನತೆ ಕಂಬನಿ ಮಿಡಿಯುತ್ತಿದೆ. ಮಾನ್ಯ ಜ್ಞಾನೋದಯ ಶಾಲೆಯ ಶಿಕ್ಷಕ ರಕ್ಷಕ ಸಮಿತಿ , ಮೃತರು ಸ್ಥಾಪಕ ಸದಸ್ಯರಾಗಿದ್ದ ಸಾಮ್ರಾಟ್ (ರಿ) ಮಾನ್ಯ,ಯಕ್ಷಮಿತ್ರ (ರಿ) ಮಾನ್ಯ, ಶ್ರೀ ಅಯ್ಯಪ್ಪ ಸೇವಾ ಸಂಘ (ರಿ) ಮಾನ್ಯ ಮೃತರ ನಿಧಾನಕ್ಕೆ ಸಂತಾಪ ವ್ಯಕ್ತ ಪಡಿಸಿದೆ.