61
ಬದಿಯಡ್ಕ ಪಂಚಾಯತ್ ಮಟ್ಟದ ಸೇವಾಭಾರತಿ ಘಟಕವನ್ನು ಸೇವಾಭಾರತಿ ಜಿಲ್ಲಾ ಉಪಾಧ್ಯಕ್ಷ ಅಶೋಕನ್ ಟಿ.ವಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾಜದಲ್ಲಿ ಅಶಕ್ತರಿಗೆ ಮತ್ತು ಅಸಹಾಯಕರಿಗೆ ನೆರವಾಗುತ್ತಾ ಸೇವಾಕೈಂಕರ್ಯಗಳಿಂದ ಆಸರೆಯಾಗುತ್ತಾ ಸೇವಾಭಾರತಿ ಸಮಾಜಮುಖಿ ಕಾಯಕವನ್ನು ಪ್ರತಿಫಲಾಪೇಕ್ಷೆ ಇಲ್ಲದೇ ನಡೆಸಬೇಕು. ಆಗ ಸಮಾಜ ಕಟ್ಟುವ ಕೆಲಸವಾಗುತ್ತದೆ ಮತ್ತು ಆಸಹಾಯಕರಲ್ಲಿ ಬದುಕಿನ ಭರವಸೆ ಮೂಡುತ್ತದೆ ಎಂದವರು ಹೇಳಿದರು.
ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಸೇವಾ ಪ್ರಮುಖ್ ಮಂಜುನಾಥ ಕಾರ್ಲೆ, ಬದಿಯಡ್ಕ ಖಂಡ್ ಸಹಕಾರ್ಯವಾಹ ರಾಜೇಶ್ ವಳಮಲೆ, ಜಿಲ್ಲಾ ಸಮಿತಿ ಜೊತೆ ಕಾಯದರ್ಶಿ ಪ್ರತೀಕ್ ಆಳ್ವ ಪೆರಡಾಲ, ಪಂಚಾಯತ್ ಸಮಿತಿ ಅಧ್ಯಕ್ಷ ಸದಾಶಿವ ಮಾಸ್ಟರ್ ಬೇಳ, ಬದಿಯಡ್ಕ ಖಂಡ್ ಸೇವಾ ಪ್ರಮುಖ್ ಗಣೇಶ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.
ಬಾಲಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಅಡ್ವಕೇಟ್ ಗಣೇಶ್. ಬಿ . ವಂದಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.