ಏತಡ್ಕ : ” ತನು ಮನದ ಶಿವಾರ್ಪಣಂ ಶ್ರಮದಾನ ಸೇವೆ ಅಭೂತಪೂರ್ವವಾಗಿ ಎಲ್ಲರೂ ಒಂದಾಗಿ ಹಂತ ಹಂತವಾಗಿ ಮುಂದುವರಿಯುತ್ತಿರುವದು ಆ ದೇವ ಸಾನ್ನಿಧ್ಯವನ್ನು ತೋರಿಸುತ್ತದೆ.ಎಲ್ಲರೂ ಕೈಜೋಡಿಸಿ ಇನ್ನಷ್ಟು ವ್ಯಾಪಕ ಕೆಲಸಕಾರ್ಯಗಳಲ್ಲಿ ಮುಂದುವರಿಯೋಣ” ಎಂಬುದಾಗಿ ಏತಡ್ಕ ಶ್ರೀಸದಾಶಿವ ದೇವಳದ ಬ್ರಹ್ಮಕಲಶದಂಗವಾದ ಶಿವಾರ್ಪಣಂ ಶ್ರಮದಾನ ಸೇವೆ 6 ಮತ್ತು ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಿತಿಯ ಗೌರವಾಧ್ಯಕ್ಷ ಡಾ.ವೈ.ಸುಬ್ರಾಯ ಭಟ್ ನುಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ನೇತಾರರಾದ ಬಾಲಕೃಷ್ಣ ಕೆಕೆ ಕುಂಡಾಪು, ಕೆ.ನರಸಿಂಹ ಭಟ್, ವರುಂಬುಡಿ ನಾರಾಯಣ ಭಟ್, ಉಷಾ ಬಾಲಕೃಷ್ಣ ಹಾಗೂ ಶಶಿಪ್ರಭಾ ವರುಂಬುಡಿ ಯವರಿಗೆ ಆಮಂತ್ರಣ ಪತ್ರಿಕೆ ಕಟ್ಟುಗಳನ್ನು ವಿತರಿಸಲಾಯಿತು.
” ಎಲ್ಲರನ್ನೂ ಒಳಗೊಳ್ಳಿಸುವ ವಿನೂತನ ಶಿವಾರ್ಪಣಂ ಯೋಜನೆ ಅನುಕರಣೀಯವಾಗಿದೆ .ಸಮಾಜಕ್ಕೊಂದು ಪರಿಸರಸ್ನೇಹಿ ಸಂದೇಶ ನೀಡುವಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಯಶಸ್ವೀಯಾಗಿದೆ” ಎಂಬುದಾಗಿ ಸಮಿತಿಯ ಉಪಾಧ್ಯಕ್ಷ ಡಾ.ವೇಣುಗೋಪಾಲ ಕಳೆಯತ್ತೋಡಿ ವಿವರಿಸಿದರು.
ಉಷಾ ಬಾಲಕೃಷ್ಣ ಕುಂಡಾಪು ಶಿವಾರ್ಪಣಂ ಯೋಜನೆಯಂತೆ ಹೊಲಿದ ಬಟ್ಟೆ ಚೀಲವನ್ನು ಅರ್ಪಿಸಿದರು.
ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾತೃ ಮಂಡಳಿಯ ಸಂಚಾಲಕಿ ಉಷಾ ಶ್ಯಾಮ ಭಟ್ ಮತ್ತು ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಆಶಾ ಗಂಗಾ ಪ್ರಾರ್ಥನೆಗೈದರು.ಚಂದ್ರಶೇಖರ ಏತಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಧಾರ್ಮಿಕ ಸಮಿತಿ ಸಂಚಾಲಕ ಗಣರಾಜ ಕಡೇಕಲ್ಲು ವಂದಿಸಿದರು.
ದರ್ಭೆ ಹುಲ್ಲು ವಿಭಾಗೀಕರಣ,ಪಲಾಶ ಸಮಿತ್ತು ಮಾಡುವುದು , ಆಲಂಕಾರಿಕ ಹೂವಿನ ಸಿದ್ಧತೆ ಮುಂತಾದ ವಿಶಿಷ್ಟ ಶ್ರಮದಾನ ಸೇವೆ ಯಲ್ಲೂ ಕರಸೇವಕರು ನಿರತರಾಗಿದ್ದರು