ಆಚಾರ ಉಲ್ಲಂಘಿಸಿ ದುಬೈಯಲ್ಲಿ ಕಳಿಯಾಟ: ಹಿಂದೂ ಐಕ್ಯವೇದಿ ಖಂಡನೆ

ಸಾರ್ವಜನಿಕ ವೇದಿಕೆಯಲ್ಲಿ ದೈವ ಪ್ರದರ್ಶನ ಆಚಾರನುಷ್ಠಾನದ ಉಲ್ಲಂಘನೆ- ರಾಜನ್ ಮುಳಿಯಾರು

by Narayan Chambaltimar
  • ತುಳುನಾಡು ಮತ್ತು ಮಲಬಾರಿನ ಗಡಿಗಳಿಗಷ್ಟೇ ಸೀಮಿತವಾದ ದೈವಗಳನ್ನು ದುಡ್ಡಿನಾಸೆಯಿಂದ ಮನಸೋ ಇಚ್ಛೆ ಗಡಿಮೀರಿ, ಪ್ರಾಂತ್ಯದಾಟಿ ಎಲ್ಲಿ ಬೇಕಂದರಲ್ಲಿ ಪ್ರದರ್ಶಿಸುವ ಆಚಾರ ಉಲ್ಲಂಘನೆಯಿಂದ ಈಗ ದುಬಾಯಿಯಲ್ಲೂ ಕಳಿಯಾಟ ನಡೆಸಿರುವುದನ್ನು ಹಿಂದೂ ಐಕ್ಯ ವೇದಿ ಕಾಸರಗೋಡು ಜಿಲ್ಲಾಘಟಕ ಖಂಡಿಸಿದೆ.
  • ತುಳುನಾಡು/ಮಲಬಾರಿನ ಆರಾಧನಾ ಮೂರ್ತಿಯಾದ ತೈಯ್ಯಂ ಗಳನ್ನು ದುಬಾಯಿಯಲ್ಲಿ ಕಲಾಪ್ರದರ್ಶನ ಮಾದರಿಯಲ್ಲಿ ಆಚಾರ, ಅನುಷ್ಠಾನ ಉಲ್ಲಂಘಿಸಿ ಪ್ರದರ್ಶಿಸಿರುವುದು ಆಚಾರಗಳ ಲಂಘನವೆಂದು ಹಿಂದೂ ಐಕ್ಯವೇದಿ ಅಭಿಪ್ರಾಯಪಟ್ಟಿದೆ.

ದುಬೈ ಅಜ್ಮಾನ್ ನಲ್ಲಿ ನಡೆಸಿದ ಕಳಿಯಾಟ ಕಾರ್ಯಕ್ರಮದ ಕರಪತ್ರ

ಹಿಂದೂ ದೈವ,ದೇವತೆಗಳು ಮನೋರಂಜನೀಯ ಪ್ರದರ್ಶನಕ್ಕೇ ಇರುವುದಲ್ಲ. ಅದಕ್ಕೆ ಆಚಾರಾನುಷ್ಠಾನದ ಸಂಪ್ರದಾಯವಿದೆ. ಅದನ್ನುಲ್ಲಂಘಿಸಿ ದೈವಾರಾಧನಾ ಸಂಪ್ರದಾಯಕ್ಕೆ ಕಲೆ ಎಂಬ ಮುದ್ರೆಯೊತ್ತಿ ಬೇಕುಬೇಕಾದೆಡೆ ವಾಣಿಜ್ಯ ದೃಷ್ಟಿಯಿಂದ ಪ್ರದರ್ಶಿಸುವುದು ಹಿಂದೂ ಆಚಾರನುಷ್ಠಾನವನ್ನು ಮತ್ತದರ,ಮೌಲ್ಯವನ್ನು ತಗ್ಗಿಸುವ – ಕುಗ್ಗಿಸುವ ಯತ್ನದ ಭಾಗ ಎಂದು ಹಿಂದೂ ಐಕ್ಯ ವೇದಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಜನ್ ಮುಳಿಯಾರ್ ಹೇಳಿದರು.

ದೈವಸ್ಥಾನ, ತರವಾಡು ಮನೆ, ಬನ ಮತ್ತು ಪರಂಪರಾಗತ ಜಾಗಕ್ಕಷ್ಟೇ ಸೀಮಿತವಾದ ಆರಾಧನಾ ಸಂಪ್ರದಾಯವೇ ತೈಯ್ಯಂ. ಇದು ನಿರ್ದಿಷ್ಟ ವ್ಯಾಪ್ತಿಯ ಗಡಿದಾಟುವ ಸಂಪ್ರದಾಯಗಳಿಲ್ಲ. ದೈವಗಳು ಕಡಲು ದಾಟುವುದಾಗಲೀ, ಬೆಟ್ಟವೇರಿ ಮತ್ತೊಂದು ನಾಡಿಗೆ ಹೋಗುವುದಾಗಲೀ ಸಂಪ್ರದಾಯಗಳಿಲ್ಲ. ಏಕೆಂದರೆ ಆಚಾರನುಷ್ಠಾನದ ಭಾಗವಾಗಿ ಪ್ರಾಚೀನ ಕಾಲದಿಂದಲೇ ಭೂತಗಳಿಗೆ (ದೈವ) ಗಡಿ ರೇಖೆ ಇದೆ. ಅದನ್ನುಲ್ಲಂಘಿಸುವ ಅವಕಾಶ ಯಾರಿಗೆ ಯಾರೂ ಇತ್ತದ್ದಿಲ್ಲ..

ದುಬೈಯಲ್ಲಿ ಕಳಿಯಾಟಂ ಎಂಬ ಹೆಸರಲ್ಲಿ ಪವಿತ್ರ ಆರಾಧನೆಯನ್ನೇ ವೇದಿಕೆಯ ಪ್ರದರ್ಶನವಾಗಿಸಿದ ಬೆಳವಣಿಗೆ ಖಂಡಿಸಿ ನಡೆದ ಹಿಂದೂ ಐಕ್ಯವೇದಿ ಜಿಲ್ಲಾ ಘಟಕದ ಸಭಯಲ್ಲಿ ಪ್ರಮುಖ ಪದಾಧಿಕಾರಿಗಳು ಪಾಲ್ಗೊಃಡರು.

ಯು.ಎ.ಇಯಲ್ಲಿ ಮೊದಲ ಬಾರಿಗೆ ಎಂಬಂತೆ ವಿನ್ನರ್ಸ್ ಸ್ಪೋರ್ಟ್ಸ್ ಕ್ಲಬ್ ಅಜ್ಮಾನ್ ನೇತೃತ್ವದಲ್ಲಿ ನ.24 ಭಾನುವಾರದಂದು ಕಳಿಯಾಟಂ ನಡೆಸಲಾಗಿತ್ತು. ದೈವಸ್ಥಾನಗಳಲ್ಲಿ ಅಲ್ಲದೇ ಮತ್ತೊಂದೆಡೆ ಕಳಿಯಾಟಂ ನಡೆಸುವ ರೂಢಿ ಇಲ್ಲ. ಆದರೆ ಆಚಾರಗಳನ್ನುಲಂಘಿಸಿ ದುಬೈಯಲ್ಲಿ ಕಳಿಯಾಟ ಪ್ರದರ್ಶನ ನಡೆದಿದೆ. ವಾಣಿಜ್ಯ ದೃಷ್ಟಿಯಿಂದ ಇಡೀ ದಿನದ ಪ್ರದರ್ಶನೋತ್ಸವ ಎಂಬಂತೆ ಹಮ್ಮಿಕೊಂಡ ಕಾರ್ಯಕ್ರಮ ಆಚಾರದ ಉಲ್ಲಂಘನೆ ಎಂದು ಹಿಂದೂ ಐಕ್ಯ ವೇದಿ ಅಭಿಪ್ರಾಯಪಟ್ಟಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00