33
ಸಂವಿಧಾನ ಪೀಠಿಕೆಯಲ್ಲಿ “ಸಮಾಜವಾದ, ಜಾತ್ಯಾತೀತ”
ಎಂಬ ಪದಗಳನ್ನು ಸೇರಿಸಿದ 1976ರ ಸಂವಿಧಾನ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟು ಸೋಮವಾದ ವಜಾಮಾಡಿದೆ.
1976ರಲ್ಲಿ ತುರ್ತುಪರಿಸ್ಥಿತಿಯ ವೇಳೆ 42ನೇ ತಿದ್ದುಪಡಿ ಮುಖೇನ ಸಮಾಜವಾದ ಮತ್ತು ಜಾತ್ಯಾತೀತ ಎಂಬೆರಡು ಪದಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಡಾ.ಸುಬ್ರಹ್ಮಣ್ಯಂ ಸ್ವಾಮಿ, ಬಲರಾಂ ಸಿಂಗ್, ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಅರ್ಜಿಸಲ್ಲಿಸಿದ್ದರು.
ಇಂದು ಅರ್ಜಿ ಪರಿಗಣಿಸಿದ ಸಿಜೆಐ ಸಂಜೀವ ಖನ್ನಾ ನೇತೃತ್ವದ ಪೀಠ ಈ ಅರ್ಜೀಗಳ ಕುರಿತಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಅರ್ಜಿ ತಿರಸ್ಕರಿಸಿದೆ.
ಸಂವಿಧಾನ ತಿದ್ದುಪಡಿಯ ಅಧಿಕಾರ ಸಂಸತ್ತಿಗಿದೆ. ತಿದ್ದುಪಡಿ ನಡೆದು ವರ್ಷಗಳೇ ಕಳೆದ ಬಳಿಕ ಈಗ ಅದನ್ನು ರದ್ದು ಪಡಿಸಲಾಗದೆಂದು ಪೀಠ ಅಭಿಪ್ರಾಯಪಟ್ಟಿದೆ.