ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರ 99 ನೇ ಹುಟ್ಟುಹಬ್ಬವನ್ನು ನ.23ರಂದು ಬಾಯಾರಿನ ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಾತಃಕಾಲ 5.20 ಕ್ಕೆ ಓಂಕಾರ, ಸುಪ್ರಭಾತ ಹಾಗೂ ನಗರ ಸಂಕೀರ್ತನೆ ಯೊಂದಿಗೆ ಪ್ರಾರಂಭಗೊಂಡು ,ನಂತರ ವೇದ ಪಠಣದೊಂದಿಗೆ ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್ ಇವರ ನೇತೃತ್ವದಲ್ಲಿ ಅಷ್ಟಾವಧಾನ ಸಹಿತ ಶ್ರೀ ಸತ್ಯಸಾಯಿ ಪೂಜೆ ನೆರವೇರಿತು. ನಂತರ ಶ್ರೀ ಸ್ವಾಮಿಗೆ ಮಂಗಳಾರತಿಯೊಂದಿಗೆ ಜೂಲೋತ್ಸವ, ನಾರಾಯಣ ಸೇವೆ ನಡೆಯಿತು.
ಗೌರವಾರ್ಪಣೆ
ಅಪರಾಹ್ನ 2 ಗಂಟೆಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಪೆಲತ್ತಡ್ಕ ರಾಮಕೃಷ್ಣ ಭಟ್ ವಹಿಸಿದ್ದರು.
ಅತಿಥಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳು ರಚನೆ ಮಾಡಿದ ಕನ್ನಡ ಹಸ್ತ ಪತ್ರಿಕೆ “ಬೆಳಕು”ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಗೆ ಸಹಕರಿಸಿದ ಹಿರಿಯ ವ್ಯಕ್ತಿಗಳಾದ ಹಮೀದ್ ಹಾಜಿ ಗಾಳಿಯಡ್ಕ, ಅಬ್ದುಲ್ ಹಾಜಿ ಗಾಳಿಯಡ್ಕ, ಶ್ರೀಧರ ಆಚಾರ್ಯ, ಪ್ರಭಾಕರ ದೇವಾಡಿಗ, ನಾರಾಯಣ ಮೊಯ್ಲಿ, ರವಿ ದೇವಾಡಿಗ ಮತ್ತು ಸುಲ್ತಾನ್ ಕಬೀರ್ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಗೌರವಾರ್ಪಣೆ ಸ್ವೀಕರಿಸಿದ ಹಿರಿಯ ವ್ಯಕ್ತಿಗಳ ಪರಿಚಯವನ್ನು ಸಂಸ್ಥೆಯ ಆಡಳಿತ ಮಂಡಳಿಯ ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್ ನೆರವೇರಿಸಿದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲಾ ಸಂಚಾಲಕರಾದ ಹಿರಣ್ಯ ಮಹಾಲಿಂಗ ಭಟ್, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸದಾಶಿವ ಭಟ್ ಪಯ್ಯರಕೋಡಿ ಮತ್ತು ಹಿರಿಯ ವಿದ್ಯಾರ್ಥಿಗಳು ಅತಿಥಿಗಳಾಗಿ ಸಭಾಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲ ವಾಮನನ್ ಸ್ವಾಗತಿಸಿ, ಕನ್ನಡ ಶಿಕ್ಷಕ ನಿತ್ಯಾನಂದ ಕೆ ಆರ್ ಬೇಕೂರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಾರ್ಗದರ್ಶಕ ಶ್ರೀ ಕೃಷ್ಣ ನಾಯಕ್ ವಂದನಾರ್ಪಣೆಗೈದರು
ಸಂಜೆ ಶ್ರೀ ಸ್ವಾಮಿಗೆ ವಿಶೇಷ ಭಜನಾ ಸೇವೆ ಮತ್ತು ಶ್ರೀ ಕೋದಂಡರಾಮ ಕೃಪಾ ಪೂಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ಸೇವೆ ನಡೆಯಿತು.