ಮಲಯಾಳಂ ಚಿತ್ರರಂಗದಲ್ಲಿ ತಲ್ಲಣವನ್ನೆಬ್ಬಿಸಿದ ನಟರುಗಳ ಲೈಂಗಿಕ ದೌರ್ಜನ್ಯ ಪ್ರಕರಣ ದಿಢೀರನೆ ಹೊಸ ತಿರುವು ಪಡೆದಿದೆ.
ಮಲಯಾಳಂ ನಟರುಗಳಾದ ಶಾಸಕ ಮುಖೇಶ್, ಯುವನಟ ಜಯಸೂರ್ಯ, ನಟ-ನಿರ್ದೇಶಕ ಬಾಲಚಂದ್ರ ಮೆನನ್ ಸಹಿತ 7ಮಂದಿ ನಟರ ವಿರುದ್ದ ನೀಡಲಾಗಿದ್ದ ಲೈಂಗಿಕ ದೌರ್ಜನ್ಯದ ದೂರನ್ನು ಹಿಂತೆಗೆಯುವುದಾಗಿ ದೂರುದಾತೆ ನಟಿ ಪ್ರಕಟಿಸಿದ್ದಾರೆ.
ತನಗೆ ಸರಕಾರದ ಕಡೆಯಿಂದಲೂ, ಮಾಧ್ಯಮಗಳ ಕಡೆಯಿಂದಲೂ ಸಾಮಾಜಿಕ ನ್ಯಾಯದೃಷ್ಟಿಯ ಬೆಂಬಲ ಸಿಗದ ಕಾರಣ ತಾನು ಹೋರಾಟದಿಂದ ಹಿಂಜರಿಯುವುದಾಗಿ ದೂರುದಾತೆ ನಟಿ ಹೇಳಿಕೆ ಇತ್ತಿದ್ದಾರೆ.
ಸಿನಿಮಾರಂಗದ ಹಲವರು ತನ್ನನ್ನು ಲೈಂಗಿಕ ತೃಷೆಗೆ ಬಳಸಲು ಯತ್ನಿಸಿದ್ದಾರೆಂದು ನಟಿ ನೀಡಿದ ದೂರು ಕೇರಳ ಸಿನಿಮಾರಂಗದಲ್ಲಿ ಕೋಲಾಹಲವನ್ನೆಬ್ಬಿಸಿತ್ತು. ಈ ದೂರಿನಂತೆ ತನಿಖೆ ನಡೆಯುತ್ತಿರುವಾಗಲೇ ನಟರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ತಮಿಳು,ಮಲಯಾಳಂ ಸಿನಿಮಾ ರಂಗದ ಹಿರಿಯ ಸಹನಟಿ, ಕೊಚ್ಚಿ ಆಲುವಾ ನಿವಾಸಿ ದೂರು ಹಿಂತೆಗೆಯುವುದರೊಂದಿಗೆ ಆಪಾದಿತ ನಟರಿಗೆ ರಿಲೀಫ್ ಸಿಕ್ಕಂತಾಗಿದೆ.