ಮೂರುದಿನ ಹಿಂದೆ ಕಾಣೆಯಾದ ವ್ಯಕ್ತಿಯ ಶವ ಕಾಡಲ್ಲಿ ಪತ್ತೆ

by Narayan Chambaltimar

ಕಣಿಪುರ ಸುದ್ದಿಜಾಲ,ಬದಿಯಡ್ಕ(ನ.19)

ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾದ ವ್ಯಕ್ತಿ ಸಮೀಪದ ಕಾಡಲ್ಲಿ ಮೃತರಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬದಿಯಡ್ಕ ಪೋಲೀಸ್ ಠಾಣಾವ್ಯಾಪ್ತಿಯ ಕಾಡಮನೆ ಎಂಬಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರು ಮೂಲತಃ ಮಂಗಳೂರು ಬಜಪೆ ನಿವಾಸಿ ಕೃಷ್ಣ ನಾಯ್ಕ್ (62)ಎಂದು ಗುರುತಿಸಲಾಗಿದೆ. ಇವರು ಕಾಡಮನೆಯ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು. ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಇವರಿಗಾಗಿ ವಿವಿದೆಡೆ ಹುಡುಕಾಟ ನಡೆದಿತ್ತು.ತನ್ಮಧ್ಯೆ ನಿನ್ನೆ ಸಂಜೆ ಮನೆ ಸಮೀಪದ ಕಾಡಿಂದ ದುರ್ಗಂಧ ಘಮಿಸಿದ ಹಿನ್ನೆಲೆಯಲ್ಲಿ ತಪಾಸಿಸಿದಾಗ ಮೃತದೇಹ ಪತ್ತೆಯಾಯಿತು.

ಮೃತರ ಪತ್ನಿ ಈಹಿಂದೆಯೇ ಮೃತಪಟ್ಟಿದ್ದು, ಇವರು ಸಂಬಂಧಿಕರಲ್ಲಿ ನೆಲೆಸಿದ್ದರು. ಮೃತದೇಹವನ್ನು ಮಹಜರು ಮಾಡಲು ಬದಿಯಡ್ಕ ಪೋಲೀಸರು ಕೊಂಡೊಯ್ದಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00