ಕುಂಬಳೆ ಕಣಿಪುರ ಕ್ಷೇತ್ರದಲ್ಲಿ ಹಿಂದೂ ಸಾಂಪ್ರದಾಯಿಕ ಉಡುಗೆ ಕಡ್ಡಾಯ: ಸಾರ್ವಜನಿಕ ಜಾಗೃತಿಗಾಗಿ ಫಲಕ ಅನಾವರಣ

by Narayan Chambaltimar

ಸೀಮಾ ಕ್ಷೇತ್ರವಾದ ಕುಂಬಳೆಯ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜ್ಯಾರಿಗೊಳಿಸಲು ನಿರ್ಧರಿಸಲಾಗಿದೆ. ಇದರಂಗವಾಗಿ ಜನಜಾಗೃತಿ ಧ್ಯೇಯದಿಂದ ಇಂದು ದೇವಾಲಯದಲ್ಲಿ ಫಲಕ ಹಾಕಲಾಯಿತು

ದೇವಾಲಯಕ್ಕೆ ಆಗಮಿಸುವವರು ಹಿಂದೂ ಸಾಂಪ್ರದಾಯಿಕ ಉಡುಗೆ ತೊಟ್ಟು ಆಗಮಿಸಿ, ಕ್ಷೇತ್ರ ಪ್ರವೇಶಿಸಬೇಕೆಂಬ ನಿರ್ಧಾರವನ್ನು ತಂತ್ರಿಗಳ ಮತ್ತು ಕಾರ್ಯನಿರ್ವಹಣಾಧಿಕಾರಿಗಳ ಅನುಮತಿ ಮೇರೆಗೆ ಕಣಿಪುರ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಎರಡು ತಿಂಗಳ ಹಿಂದೆಯೇ ಕೈಗೊಂಡಿತ್ತು. ಇದರಂತೆ ಜನವರಿ 1ರಿಂದ ವಸ್ತ್ರ ಸಂಹಿತೆ ಕಡ್ಡಾಯವಾಗಿದ್ದು, ಜನಜಾಗೃತಿಗಾಗಿ ಈಗಲೇ ಸೂಚನಾ ಫಲಕ ಅಳವಡಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ದೇವಾಲಯಕ್ಕೆ ಆಗಮಿಸುವವರ ಪೈಕಿ ಕೆಲವರು ಸ್ತ್ರೀ ಪುರುಷ ಭೇದ ಇಲ್ಲದೇ ಆಶ್ಲೀಲಕರವಾದ ಅರೆನಗ್ನ ಉಡುಪು ಧರಿಸಿ , ಮಾದಕ ವೇಷಭೂಷಣಗಳಿಂದ ಆಗಮಿಸುತ್ತಿದ್ದರು. ದೇವಾಲಯದಂತಹ ಸ್ಥಳಕ್ಕೆ ಹೇಗೆ ಹೋಗಬೇಕೆಂಬ ಔಚಿತ್ಯ ಪ್ರಜ್ಞೆ ಇಲ್ಲದೇ, ಪಾವಿತ್ರ್ಯಕ್ಕೆ ಕೆಡುಕುಂಟುಮಾಡುವ ದಿರಿಸು ಮತ್ತು ಸ್ವಚ್ಛತೆ ಇಲ್ಲದಿರುವಿಕೆಗಳನ್ನು ಮನಗಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಹಿಂದೂಧರ್ಮಪಾಲನೆಯ ಸಾಂಪ್ರದಾಯಿಕ ಉಡುಪು ಧರಿಸಿ ಆಗಮಿಸಬೇಕೆಂದು ಕಾಸರಗೋಡು ತಾಲೂಕಿನ ಸೀಮಾ ಕ್ಷೇತ್ರದಲ್ಲಿ ಫಲಕ ಹಾಕುವ ಪ್ರಥಮ ಘಟನೆ ಇದಾಗಿದೆ. ಇದೇ ರೀತಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲೂ ಇತ್ತೀಚಿಗೆ ವಸ್ತ್ತಸಂಹಿತೆಯ ಫಲಕ ಹಾಕಲಾಗಿತ್ತು

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00