‘ಸೀಯನ’ ಚೀಪಿ ಕೋಪೆದ ಪಾಕೊ…ತುಳು ಬದುಕಿನ ನೈಜ ಚಿತ್ರಣ: ಪ್ರೊ.ಎ.ವಿ.ನಾವಡ

ಭಾಸ್ಕರ ರೈ ಕುಕ್ಕುವಳ್ಳಿಯವರ ಕವನ ಸಂಕಲನ ಬಿಡುಗಡೆ

by Narayan Chambaltimar
  1. ತುಳು ಭಾಷೆಯಲ್ಲಿ ಬರೆಯುವ ಹೆಚ್ಚಿನ ಲೇಖಕರು ಭಾಷೆಯ ಬಗ್ಗೆ ಗಂಭೀರವಾಗಿ ಯೋಚಿಸುವುದಿಲ್ಲ. ಕಾವ್ಯ ಮತ್ತು ಸಾಹಿತ್ಯ ಎಂದರೆ ಭಾಷೆಯ ನೇಯ್ಗ ತಾನೇ?
    ಈ ನಿಟ್ಟಿನಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೀಯನ’ ಕೃತಿಯಲ್ಲಿ ವಸ್ತುವೈವಿಧ್ಯತೆಯೊಂದಿಗೆ ಭಾಷೆಯನ್ನು ಸಶಕ್ತವಾಗಿ ಬಳಸಲಾಗಿದೆ. “ಸೀಯನ” ಶೀರ್ಷಿಕೆಯೇ ಅಪ್ಪಟ ತುಳು ದೇಸಿ ಪದ. ಮೂರು ವಿಭಾಗಗಳಲ್ಲಿ ಪ್ರಕಟವಾಗಿರುವ ನೂರಕ್ಕೂ ಹೆಚ್ಚಿನ ಅವರ ಕವಿತೆಗಳಲ್ಲಿ ತುಳು ಬದುಕಿನ ನೈಜ ಚಿತ್ರಣವನ್ನು ವಿವಿಧ ಆಯಾಮಗಳಲ್ಲಿ ಕಟ್ಟಿ ಕೊಡಲಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಹಿರಿಯ ಜಾನಪದ ಸಂಶೋಧಕ ಪ್ರೊ.ಎ.ವಿ.ನಾವಡ ಅಭಿಪ್ರಾಯಪಟ್ಟರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಸಹಯೋಗದಲ್ಲಿ ನ. 17 ರಂದು ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ಜರಗಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ನೂತನ ಕೃತಿ ‘ಸೀಯನ’ ಚೀಪೆ ಕೋಪೆದ ಪಾಕ ಪದೊಕುಲು ಕವನ ಸಂಕಲನ ಬಿಡುಗಡೆ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಆಧುನಿಕ ಕವಿತೆಗಳು ನವೋದಯ ಕಾವ್ಯದ ದಾರಿಯಲ್ಲಿ ಸಾಗುತ್ತಿವೆ. ಅಲ್ಲಿ ಕನ್ನಡ, ಸಂಸ್ಕೃತ, ಇಂಗ್ಲಿಷ್ ಪದಗಳು ಧಾರಾಳ ಬಳಕೆಯಾಗುತ್ತವೆ. ತುಳುಕವಿಗಳೂ ಅದನ್ನು ಅನುಸರಿಸುತ್ತಿರುವುದು ಮತು ನೈಜ ದೇಸಿಪದ ವೈಭವಗಳನ್ನು ಮರೆಯುವುದು ಖೇದಕರ. ನಮ್ಮ ಕವಿಗಳು ಹೆಚ್ಚೆಚ್ಚು ತುಳು ಪಾಡ್ದನಗಳನ್ನು ಓದಬೇಕಾದ ಅಗತ್ಯವಿದೆ. ಜೊತೆಗೆ ತುಳು ಕೃತಿಗಳ ಭಾಷಾಂತರ ಪ್ರಕ್ರಿಯೆಯೂ ಬಿರುಸಾಗಿ ನಡೆಯಬೇಕು; ಅಕಾಡೆಮಿ ಅದನ್ನು ಪ್ರಕಟಿಸಬೇಕು. “ಸೀಯನ”ದ ಹಾಡುಗಳು ಕನ್ನಡದಲ್ಲೂ ಬರಲಿ’ ಎಂದವರು ಆಶಿಸಿದರು

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಕೃತಿಕರ್ತ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ರವೀಂದ್ರ ರೈ ಕಲ್ಲಿಮಾರು ಕೃತಿ ಪರಿಚಯ ನೀಡಿದರು. ಎ.ಕೆ.ಜಯರಾಮ ಶೇಖ, ರಾಜಾರಾಮ ಶೆಟ್ಟಿ ಮನವಳಿಕೆ, ಲಕ್ಷ್ಮೀನಾರಾಯಣ ರೈ ಹರೇಕಳ, ವಾಸಪ್ಪ ಶೆಟ್ಟಿ ಬೆಳ್ಳಾರೆ, ನಿವೇದಿತಾ ಎನ್. ಶೆಟ್ಟಿ, ಸುಮಾ ಪ್ರಸಾದ್ ವೇದಿಕೆಯಲ್ಲಿದ್ದರು. ಜಿಲ್ಲೆಯ ಖ್ಯಾತ ಗಾಯಕ, ಆರ್ಯಭಟ ಪ್ರಶಸ್ತಿ ಪುರಸ್ಕೃತ ತೋನ್ಸೆ ಪುಷ್ಕಳ ಕುಮಾರ್ ಮತ್ತು ತಂಡದವರು ‘ಸೀಯನ ಪದರಂಗಿತ’ ಕಾರ್ಯಕ್ರಮದಲ್ಲಿ ಕವನ ಸಂಕಲನದ ಪ್ರಮುಖ ಹಾಡುಗಳನ್ನು ಸ್ವರ ಸಂಯೋಜಿಸಿ ಹಾಡಿದರು.

ಯಕ್ಷಗಾನ ‌ವಿಚಾರಗೋಷ್ಠಿ:
ಇದೇ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ತುಳು ಆಟೊ: ಪ್ರಸಂಗ ಬೊಕ್ಕ ಪ್ರಯೋಗ’ ಯಕ್ಷಗಾನ ವಿಚಾರಗೋಷ್ಠಿ ಜರಗಿತು. ಯಕ್ಷಗಾನ ಕಲಾವಿದ ಮತ್ತು ಪ್ರಸಂಗಕರ್ತ ತಾರಾನಾಥ ವರ್ಕಾಡಿ ‘ತುಳುಟು ಪುರಾಣ ಪ್ರಸಂಗೊಲು’ ವಿಷಯದ ಕುರಿತು ಮಾತನಾಡಿದರು. ಶಿಕ್ಷಕ,ಭಾಗವತ ಮತ್ತು ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡ ‘ ತುಳು ಜಾನಪದ ಪ್ರಸಂಗೊ ಬೊಕ್ಕ ಕಲ್ಪ ಕತೆಕ್ಲು’ ವಿಚಾರವಾಗಿ ಪ್ರಬಂಧ ಮಂಡಿಸಿದರು. ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಸಮನ್ವಯಗೊಳಿಸಿದರು. ಮಹಾಬಲ ಶೆಟ್ಟಿ ಕೂಡ್ಲು ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಪ್ರತಿಕ್ರಿಯೆ ಸಲ್ಲಿಸಿದರು.

‘ರೆಂಜೆ ಬನೊತ ಲೆಕ್ಯೆಸಿರಿ’ ತಾಳಮದ್ದಳೆ:
ಕಾರ್ಯಕ್ರಮದ ಅಂಗವಾಗಿ ಹರೀಶ್ ಶೆಟ್ಟಿ ಸೂಡ ವಿರಚಿತ ‘ರೆಂಜೆ ಬನೊತ ಲೆಕ್ಯೆಸಿರಿ’ ತುಳು ಯಕ್ಷಗಾನ ತಾಳಮದ್ದಳೆ ಜರಗಿತು. ಭಾಸ್ಕರ ರೈ ಕುಕ್ಕುವಳ್ಳಿ , ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಡಾ. ದಿನಕರ ಎಸ್. ಪಚ್ಚನಾಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಅವಿನಾಶ್ ಶೆಟ್ಟಿ ಉಬರಡ್ಕ, ಜಯರಾಮ ಪೂಜಾರಿ ನರಿಕೊಂಬು ಅರ್ಥಧಾರಿಗಳಾಗಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಹರೀಶ್ ಶೆಟ್ಟಿ ಸೂಡಾ, ಚೆಂಡೆ-ಮದ್ದಳೆಗಳಲ್ಲಿ ಕೋಳ್ಯೂರು ಭಾಸ್ಕರ ಮತ್ತು ರೋಹಿತ್ ಉಚ್ಚಿಲ್ ಸಹಕರಿಸಿದರು

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00