ಏತಡ್ಕ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ: ದರ್ಭೆ ಹುಲ್ಲು ಸಂಗ್ರಹ ಮತ್ತು ಕೊಯ್ಲೋತ್ತರ ಮಾಹಿತಿ ವಿನಿಮಯ:

by Narayan Chambaltimar

ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬಳಕೆಗಾಗಿ ದರ್ಭೆ ಕೊಯ್ಲು ಮತ್ತು ಸಂಸ್ಕರಣೆ ಎನ್ನುವ ವಿಶಿಷ್ಟ ಕಾರ್ಯಕ್ರಮ ಏತಡ್ಕ ಕೊಚ್ಚಿ ಶ್ರೀ ಗೋಪಾಲಕೃಷ್ಣ ಭಟ್ಟರ ನಿವಾಸ ಮತ್ತು ತೋಟದಲ್ಲಿ ಜರುಗಿತು.ಪಳ್ಳತ್ತಡ್ಕ ಹವ್ಯಕ ವಲಯ ಮತ್ತು ದೇವಸ್ಥಾನ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಮಿತಿ ಕಾರ್ಯಕ್ರಮ ಆಯೋಜಿಸಿತ್ತು

ಕೃಷಿಕ ಕೊಚ್ಚಿ ಗೋಪಾಲಕೃಷ್ಣ ಭಟ್ಟರು ದರ್ಭೆ ಹುಲ್ಲನ್ನು ಕೊಯ್ಲು ಮಾಡಿ ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವೈ. ಶ್ಯಾಮ ಭಟ್ಟರಿಗೆ ಸಾಂಕೇತಿಕವಾಗಿ ಕ್ಷೇತ್ರದಲ್ಲಿ ನೀಡಿ ಔಪಚಾರಿಕವಾಗಿ ಉದ್ಘಾಟಿಸಿದರು.

” ದರ್ಭೆ ಕೊಯ್ಲು ಮತ್ತು ಸಂಸ್ಕರಣೆಗೆ ಪಾವಿತ್ರ್ಯತೆ ಯು ದೃಷ್ಟಿಯಿಂದ ಪಾರಂಪರಿಕವಾದ ವಿಧಿ ವಿಧಾನಗಳಿವೆ.’ಧರ್ಭಾಹರಣ’ವೆನ್ನುವ ದಿನದಿಂದ ಇದರ ಕೊಯ್ಲು ಆರಂಭ.ಕೊಯ್ಲಿನ ದಿನವೇ ಒಣಗಿಸುವುದು ಗುಣಮಟ್ಟ ಕಾಯ್ದುಕೊಳ್ಳಲು ಬಹು ಮುಖ್ಯ ಅಂಶ.ಸುದೀರ್ಘ ಬಾಳ್ವಿಕೆ ಹಾಗೂ ವೈದಿಕ ಬಳಕಗೆ ಆಗ ಸೂಕ್ತವಾಗುತ್ತದೆ ” ಎಂಬುದಾಗಿ ಯುವ ಕೃಷಿಕ ಶಿವಕುಮಾರ್ ಕೊಚ್ಚಿ ಸಮಗ್ರ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕೃಷಿಕರ ನಿವಾಸದಲ್ಲಿ ನಡೆದ ವಿಚಾರ ವಿನಿಮಯ ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ವೈ.ಶ್ಯಾಮ ಭಟ್ಟರುವಹಿಸಿದ್ದರು.” ದರ್ಭೆಯ ಕೊಯ್ಲೋತ್ತರದ ಬಳಕೆಯ ಕುರಿತು ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಪನೆಯಾಲ ಗೋವಿಂದ ಭಟ್ಟರು ಮಾಹಿತಿ ನೀಡಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಡಾ.ವೈ.ವಿ.ಕೃಷ್ಣಮೂರ್ತೀ ಸ್ವಾಗತ ಹಾಗೂ ನಿರೂಪಣೆಗೈದರು.ಧಾರ್ಮಿಕ ಸಮಿತಿಯ ಸಂಚಾಲಕರಾದ ಗಣರಾಜ ಕಡೇಕಲ್ಲು ಧನ್ಯವಾದನೀಡಿದರು.ಚಂದ್ರಶೇಖರ ಏತಡ್ಕ ಕಾರ್ಯಕ್ರಮ ಸಂಯೋಜಿಸಿದ್ದರು.
ವೈದಿಕ, ತಾಂತ್ರಿಕ ಹಾಗೂ ವೈದ್ಯಕೀಯವಾಗಿಯೂ ಅತ್ಯಂತ ಮಹತ್ವದ ಧರ್ಭೆಯ ಕೃಷಿ, ಸಂಸ್ಕರಣೆ ಮತ್ತು ಬಳಕೆಯ ಕುರಿತು ಈ ಶಿವಾರ್ಪಣಂ ಚಟುವಟಿಕೆ ಬೆಳಕುಬೀರಿತು

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00