ಕೇರಳ ಪ್ರಮುಖ ಬಿಜೆಪಿ ಯುವನಾಯಕ ಸಂದೀಪ್ ವಾರಿಯರ್ ಕಾಂಗ್ರೆಸ್ಸಿಗೆ: ಪಾಲಕ್ಕಾಡ್ ಉಪಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಶಾಕ್..

by Narayan Chambaltimar

ಪಾಲಕ್ಕಾಡ್ ಉಪಚುನಾವಣೆ ನಡೆಯಲು ಬೆರಳೆಣಿಕೆಯ ಕೇವಲ ದಿನಗಳಿರುವಂತೆಯೇ ಕೇರಳ ಬಿ.ಜೆ.ಪಿಯ ಬೆಂಕಿಚೆಂಡೆಂದೇ ಖ್ಯಾತರಾಗಿದ್ದ ಯುವ ನಾಯಕ ಸಂದೀಪ್ ವಾರಿಯರ್ ಕಾಂಗ್ರೆಸ್ ಪಾಳಯಕ್ಕೆ ಧುಮುಕಿದ್ದಾರೆ. ಇಂದು ಪಾಲಕ್ಕಾಡ್ ನಲ್ಲಿ ನಡೆದ ಕಾಂಗೈ ಅಭ್ಯರ್ಥಿಯ ಚುನಾವಣಾ ಪ್ರಚಾರಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸುಧಾಕರನ್ ಸಹಿತ ನಾಯಕರು ಕೈ ಹಿಡಿದು ಕರೆತಂದು, ಆಲಿಂಗನಗೈದು, ಶಾಲು ಹೊದಿಸಿ ಗೌರವಿಸಿ ಕಾಂಗ್ರೆಸ್ ಸದಸ್ಯತ್ವ ನೀಡಿದರು.

ಟಿ.ವಿ ಡಿಬೇಟುಗಳಲ್ಲಿ ಬಿಜೆಪಿ ಪರ ಪ್ರಖರ ವಾಗ್ಮಿಯಾಗಿ ಕಾಣಿಸಿಕೊಂಡಿದ್ದ ಸಂದೀಪ್ ವಾರಿಯರ್ ಯುವ ಕಾರ್ಯಕರ್ತರ ಒಲವಿನ ನಾಯಕನಾಗಿ ಬೆಳೆದಿದ್ದರು. ಆದರೆ ತನ್ನನ್ನು ಬಿಜೆಪಿಯಲ್ಲಿ ನಾಯಕತ್ವ ತುಳಿಯುತ್ತಿದೆ ಎಂದು ಆಕ್ಷೇಪಿಸಿ ಇತ್ತೀಚಿನ ದಿನಗಳಲ್ಲವರು ಬಹಿರಂಗ ಹೇಳಿಕೆ ನೀಡುತ್ತಾ,ಪಕ್ಷ ಚಟುವಟಿಕೆಯಿಂದ ದೂರಸರಿದಿದ್ದರು.
ಇವರನ್ನು ಮರಳಿ ಪಕ್ಷದಲ್ಲಿ ಸಕ್ರಿಯರಾಗುವಂತೆ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆಹ್ವಾನಿಸಿದ್ದರು. ಆದರೆ ಆಹ್ವಾನವನ್ನು ತಿರಸ್ಕರಿಸಿದ್ದ ಸಂದೀಪ್ ವಾರಿಯರ್ ಮನವೊಲಿಕೆಗೆ ಆರ್.ಎಸ್.ಎಸ್ ಪ್ರಯತ್ನಿಸಿತ್ತಾದರೂ ವಿಫಲವಾಗಿತ್ತು.ಈ ಹಿನ್ನೆಲೆಯಲ್ಲಿ ಬಿಜೆಪಿ ಜವಾಬ್ದಾರಿಗಳಿಂದ ಅವರನ್ನು ಮುಕ್ತಗೊಳಿಸಲಾಗಿತ್ತು.

ಪ್ರತ್ಯಕ್ಷ ಬಂಡಾಯ ಸಾರಿದ್ದ ಅವರು ಸಿಪಿಎಂ ಸೇರುತ್ತಾರೆಂಬ ವದಂತಿ ಇತ್ತು. ಆದರೆ ಕಾಂಗ್ರೆಸ್ ನಾಯಕರು ರಹಸ್ಯವಾಗಿ ಸಂಪರ್ಕಿಸಿ, ಚುನಾವಣಾ ಸಂದರ್ಭದಲ್ಲೇ ಬಿಜೆಪಿಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ತಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಕಾರಣರೆಂದು ಸುರೇಂದ್ರನ್ ಅವರನ್ನು ಸಂದೀಪ್ ಕಟುವಾಗಿ ಟೀಕಿಸಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00