ಕಂಚಿ ಕಾಮಕೋಟಿ ಪೀಠಾಧೀಶ ವಿಜಯೇಂದ್ರ ಸರಸ್ವತಿ ಶ್ರೀಗಳು ಎಡನೀರಿಗೆ: ಎಡನೀರು ಶ್ರೀಗಳಿಗೆ ದೀಕ್ಷೆಯಿತ್ತ ಆಚಾರ್ಯರನ್ನು ಸ್ವಾಗತಿಸಲು ಎಡನೀರು ಸಜ್ಜು

by Narayan Chambaltimar

ಎಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರಿಗೆ ದೀಕ್ಷೆಯಿತ್ತು ಹರಸಿದ ಕಂಚಿ ಕಾಮಕೋಟಿ ಪೀಠಾಧೀಶ ಶ್ರೀ ಶಂಕರವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ನಾಳೆ ಮುಂಜಾವ ಎಡನೀರು ಸಂಸ್ಥಾನಕ್ಕೆ ಕಾಲೂರುವರು. ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಶ್ರೀಗಳವರು ಪೀಠಾಧೀಶರಾದ ಬಳಿಕ ಇದೇ ಮೊದಲ ಬಾರಿಗೆ ಚಿತ್ತೈಸುವ ಕಂಚಿಶ್ರೀಗಳ ಸ್ವಾಗತಕ್ಕೆ ಎಡನೀರಿನಲ್ಲಿ ಭರದ ಸಿದ್ಧತೆಗಳಾಗಿವೆ.

ನ.17ರಂದು ಭಾನುವಾರ ಬೆಳಿಗ್ಗೆ 8.30ಕ್ಕೆ ಸುಮಾರು 50ಮಂದಿ ಋತ್ವಿಜರು ಸಹಿತವಾದ ಪರಿವಾರದೊಂದಿಗೆ ಅವರು ಎಡನೀರು ಪುರ ಪ್ರವೇಶಿಸುವರು. ಈ ವೇಳೆ ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದರ ನೇತೃತ್ವದಲ್ಲಿ ಎಡನೀರು ಪೌರಾವಳಿ ಸಹಿತ ಶ್ರೀಮಠದ ಶಿಷ್ಯಪರಂಪರೆ ವೇದಘೋಷಗಳಿಂದ ಪೂರ್ಣ ಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳುವರು.
ಕಂಚಿಶ್ರೀಗಳ ಉಪಾಸನಾ ಮೂರ್ತಿ ಆರಾಧನೆ ಸಹಿತ ಪರಿವಾರಕ್ಕೆ ಶ್ರೀಮಠ ಪರಿಸರದಲ್ಲಿ ಪ್ರತ್ಯೇಕ ವ್ಯವಸ್ಥೆ ಏರ್ಪಡಿಸಲಾಗಿದೆ.

ಬೆಳಿಗ್ಗೆ 10ರಿಂದ ಸಂಜೆ 3ರತನಕ ಪೂಜಾದಿ ಕೈಂಕರ್ಯಗಳ ಆರಾಧನೆ ನಡೆದು ಸಂಜೆ 5.30ಕ್ಕೆ ದೀಕ್ಷೆ ನೀಡಿದ ಆಧ್ಯಾತ್ಮಿಕ ಆಚಾರ್ಯರಿಗೆ ಎಡನೀರು ಮಠದ ಗೌರವಾಭಿನಂದನೆ ನಡೆಯಲಿದೆ. ಬಳಿಕ ಸಂಜೆ 7ರಿಂದ ರಾತ್ರಿ 10ರ ತನಕ ಆಯ್ದ ಕಲಾವಿದರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ ಜರಗಲಿದೆ.
ದಕ್ಷಿಣಕನ್ನಡದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂದರ್ಶನ ಇತ್ತು ಗಡಿನಾಡು ಕಾಸರಗೋಡಿನ ಎಡನೀರು ಮಠ ಸಂದರ್ಶನಗೈದು ಅವರು ಕಂಚೀ ಪೀಠಕ್ಕೆ ನಿರ್ಗಮಿಸುವರು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00