- ಪುತ್ತೂರು ಬೊಳುವಾರಿನ ಆಂಜನೇಯ ಯಕ್ಷಗಾನ ಕಲಾ ಸೇವಾ ಸಂಘದ 56ನೇ ವಾರ್ಷಿಕೋತ್ಸವ ಮತ್ತು ಆಂಜನೇಯ ಮಹಿಳಾ ಯಕ್ಷಗಾನ ಸಂಘದ 20ನೇ ವರ್ಷಾಚರಣೆಯನ್ನು ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಡಿಸೆಂಬರ್ 25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಸಿದ್ಧತಾ ಸಭೆಯು ಪುತ್ತೂರು ಪರ್ಲಡ್ಕ ಅಗಸ್ತ್ಯ ದಲ್ಲಿ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆಯಲ್ಲಿ ಜರಗಿತು.
ತಾಳಮದ್ದಳೆಯಾಗಿ ಉಭಯಸಂಘದ ಸದಸ್ಯರಿಂದ
ಋಷಿ ಮತ್ತು ಋಷಿಪತ್ನಿ ಸಂವಾದ ಸರಣಿ, ಹಿರಿಯ ಕಲಾವಿದರ ತಾಳಮದ್ದಳೆ, ಸಭಾ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಸಾಧಕರಿಗೆ ಸನ್ಮಾನ,
ಯಕ್ಷಾಂಜನೇಯ ಪ್ರಶಸ್ತಿ, ಮಹಿಳಾ ಭಾಗವತರಿಗೆ ವಿಂಶತಿ ಪ್ರಶಸ್ತಿ ಮತ್ತು ಬೆಂಗಳೂರಿನ ಜಸ್ಟಿಸ್ ಜಗನ್ನಾಥ ಶೆಟ್ಟಿ ಮೆಮೊರಿಯಲ್ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು
ಭಾಸ್ಕರ ಬಾರ್ಯ ತಿಳಿಸಿದರು.
ಕಾರ್ಯದರ್ಶಿ ಆನಂದ ಸವಣೂರು
ಸಹಕಾರ್ಯದರ್ಶಿ ಅಚ್ಯುತ್ತ ಪಾಂಗಣ್ಣಾಯ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಮಹಿಳಾ ಯಕ್ಷಗಾನ ಅಧ್ಯಕ್ಷೆ ಪ್ರೇಮಲತಾ ರಾವ್,ದುಗ್ಗಪ್ಪ ಎನ್,ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್,
ಗುಂಡ್ಯಡ್ಕ ಈಶ್ವರ ಭಟ್,
ಗುಡ್ಡಪ್ಪ ಬಲ್ಯ,ಕಿಶೋರಿ ದುಗ್ಗಪ್ಪ, ಹರಿಣಾಕ್ಷಿ ಜೆ ಶೆಟ್ಟಿ, ,ಮಾ. ಪರೀಕ್ಷಿತ್ ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.
ಭಾರತಿ ರೈ ಅರಿಯಡ್ಕ ಪ್ರಾರ್ಥಿಸಿದರು. ರಂಗನಾಥ ರಾವ್ ಬೊಳುವಾರು ಸ್ವಾಗತಿಸಿ ಗುಡ್ಡಪ್ಪ ಬಲ್ಯ ವಂದಿಸಿದರು.