152
- ಮಾನ್ಯ ಅಯ್ಯಪ್ಪ ಭಜನಾ ಮಂದಿರದಿಂದ ಕಳವುಗೈದ ತಂಡದ ಓರ್ವನನ್ನು ಬಂಧಿಸಲಾಗಿದೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ಕೊಯ್ಲ ನಿವಾಸಿ ಕೆ.ಇಬ್ರಾಹಿಂ(42) ಎಂಬಾತನನ್ನು ಬದಿಯಡ್ಕ ಪೋಲೀಸರು ಬಂಧಿಸಿದ್ದು, ಈತನನ್ನು ಹೆಚ್ಚುವರಿ ವಿಚಾರಣೆಗೊಳಪಡಿಸಲಾಗುತ್ತಿದೆ.
ನ.4ರಂದು ಮುಂಜಾವ ಮಾನ್ಯ ಶ್ರೀ ಅಯ್ಯಪ್ಪ ಮಂದಿರದಿಂದ ರಜತ ಲೇಪಿತ ವಿಗ್ರಹವನ್ನು ಕದ್ದೊಯ್ಯಲಾಗಿತ್ತು. ಬಳಿಕ ಅದರ ಫ್ರೇಮನ್ನು ಕಾರ್ಮಾರಿನ ಪೊದೆ ಕಾಡಿಗೆ ಎಸೆದು ಕಳ್ಳರ ತಂಡ ಪರಾರಿಯಾಗಿತ್ತು. ಇದೇ ದಿನ ನೆಲ್ಲಿಕಟ್ಟೆ ನಾರಾಯಣ ಗುರು ಮಂದಿರ, ಪೊಯಿನಾಚಿ ಧರ್ಮಶಾಸ್ತ ಕ್ಷೇತ್ರದಿಂದಲೂ ಕಳ್ಳತನವಾಗಿತ್ತು. ಇದಕ್ಕಿಂತ ಒಂದು ದಿನ ಮೊದಲು ಎಡನೀರು ವಿಷ್ಣುಮಂಗಲ ದೇವಾಲಯದಿಂದ ಕಳ್ಳತನವಾಗಿತ್ತು. ಒಟ್ಟು ಎರಡು ದಿನದಲ್ಲಿ ಮಂಜೇಶ್ವರ, ಕಾಸರಗೋಡು ತಾಲೂಕಿನ 6ಕಡೆಗಳಲ್ಲಿ ಕಳ್ಳತನವಾಗಿದ್ದು, ಈ ಪೈಕಿ ಓರ್ವನ ಬಂಧನ ನಡೆಯುವುದರೊಂದಿಗೆ ಕಳ್ಳರ ಸುಳಿವು ದೊರೆತಿದೆಯೆಂದು ಪೋಲೀಸ್ ಮೂಲಗಳು ತಿಳಿಸಿವೆ.