40
ದೆಹಲಿ: ಉತ್ತರಪ್ರದೇಶ ಸರಕಾರದ ಬುಲ್ಡೋಜರ್ ಪ್ರತಿಕಾರಕ್ಕೆ ಸುಪ್ರೀಂಕೋರ್ಟ್ ಇಂದು ಚಾಟಿ ಬೀಸಿದೆ. ಶೋಕಾಸ್ ನೋಟೀಸು ನೀಡದೇ ಯಾವುದೇ ಸಂದರ್ಭ ಯಾರದ್ದೇ ಕಟ್ಟಡ ನೆಲಸಮಗೊಳಿಸುವುದು ಸಲ್ಲದು ಎಂದು ಸುಪ್ರೀಂ ತೀರ್ಪಿತ್ತಿದೆ.
ಉತ್ತರಪ್ರದೇಶ ಸರಕಾರದ ಬುಲ್ಡೋಜರ್ ನ್ಯಾಯದ ಸಾಂವಿಧಾನಿಕ ಸಿಂಧುತ್ವ ಕುರಿತಾದ ವಾದ ಆಲಿಸಿದ ಕೋರ್ಟು ನ್ಯಾಯದ ಹೆಸರಲ್ಲಿ ಕಟ್ಟಡ ಕೆಡವಿ ಹಾಕುವುದು ಅಸಂವಿಧಾನಿಕ ಮತ್ತು ಅಕ್ಷಮ್ಯ ಎಂದಿದೆ.
ಅಧಿಕಾರಿಗಳೇ ನ್ಯಾಯಾಧೀಶರೇನಲ್ಲ. ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದೇ ಘೋಷಿಸಲು ಅಧಿಕಾರಿಗಳಿಗೆ ಹಕ್ಕಿಲ್ಲ. ಸರಕಾರ ಮತ್ತು ಅಧಿಕಾರಿಗಳು ನಿರಂಕುಶ ಪ್ರಭುತ್ವ ಹೊಂದಿಲ್ಲ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.
ಯಾವುದೇ ಪ್ರಕರಣದಲ್ಲಿ ಕಟ್ಟಡ ಕೆಡವಬೇಕಿದ್ದರೆ 15ದಿನಗಳ ಮುಂಚಿತ ಶೋಕಾಸ್ ನೀಡಬೇಕು. ಇದನ್ನು ಪಾಲಿಸದೇ ಬುಲ್ಡೋಜರ್ ಹತ್ತಿಸುವಂತಿಲ್ಲ ಎಂದು ಸುಪ್ರೀಂಕೋರ್ಟು ಹೇಳಿದೆ