ಕಣಿಪುರ ಸುದ್ದಿಜಾಲ,ಎಡನೀರು
- ಕಾಸರಗೋಡು ತಾಲೂಕಿನಲ್ಲಿ ಹಿಂದೂ ಕ್ಷೇತ್ರಗಳ ಮೇಲೆ ನಿರಂತರ ಆಕ್ರಮಣ, ಕಳ್ಳತನ ಒಂದೆಡೆಯಾದರೆ ಮತ್ತೊಂದೆಡೆ ಸ್ವಾಮೀಜಿಗಳ ವಾಹನ ಸಂಚಾರಕ್ಕೂ ತಡೆಯೊಡ್ಡುವ ಬೆಳವಣಿಗೆಗಳ ಮಧ್ಯೆ ವಖ್ಫ್ ಮಂಡಳಿ ದೇಶದಾದ್ಯಂತ ಹಿಂದೂ ಭೂಮಿಗಳನ್ನೆಲ್ಲ ಕಬಳಿಸಲು ಹೊರಟಿದೆ.
- ಈ ಹಿನ್ನೆಲೆಯಲ್ಲಿ ಹಿಂದೂ ಐಕ್ಯವೇದಿಕೆ ಕೇರಳ ರಾಜ್ಯಾದ್ಯಂತ ಹೋರಾಟ,ಜನಜಾಗೃತಿಗೆ ಧುಮುಕಿದೆ. ಇದರಂತೆ ನ.20ರಿಂದ ಕಾಸರಗೋಡು ಜಿಲ್ಲೆಯಲ್ಲೂ ಹಿಂದೂ ಐಕ್ಯವೇದಿ ಹೋರಾಟ ನಡೆಯಲಿದೆ.ಇದರ ಪೂರ್ವಭಾವಿ ಕೇರಳ ರಾಜ್ಯ ಹಿಂದೂ ಐಕ್ಯ ವೇದಿಕೆ ನಾಯಕರು ಶ್ರೀಮದೆಡನೀರು ಮಠಕ್ಕೆ ಭೇಟಿ ಇತ್ತು ಶ್ರೀಗಳವರ ಜತೆ ಸಮಾಲೋಚನೆ ನಡೆಸಿದರು.
ಹಿಂದೂ-ಕ್ರೈಸ್ತರ ಪಾರಂಪರಿಕ ಸೊತ್ತನ್ನು ಕಬಳಿಸುವ ವ್ಯವಸ್ಥಿತ ವಕ್ಫ್ ಜಿಹಾದ್ ಕೇರಳದಲ್ಲೂ ವ್ಯಾಪಕವಾಗಿದೆ. ಅನೇಕ ಕಡೆ ಅನೇಕರ ಎಕ್ರೆಗಟ್ಟಲೆ ಪರಂಪರಾಗತ ಸೊತ್ತುಗಳಿಗೆ ವಕ್ಫ್ ನೋಟೀಸು ಬಂದಿದೆ.ನೂರಾರು ಜನ ಅತಂತ್ರರಾಗುವ ಭಯದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿಯ ಭೂ ಜಿಹಾದಿ ವಿರುದ್ಧ ಹಿಂದೂ ಐಕ್ಯ ವೇದಿಕೆ ಕೇರಳ ವ್ಯಾಪಕ ಪ್ರತ್ಯಕ್ಷ ಹೋರಾಟಕ್ಕಿಳಿದಿದೆ ಎಂದು ಹಿಂದೂ ಐಕ್ಯ ವೇದಿಕೆ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಹರಿದಾಸ್ ತಿಳಿಸಿದರು.
ಶ್ರೀಮದೆಡನೀರು ಮಠದಲ್ಲಿ ಕಣಿಪುರ ನ್ಯೂಸ್ ಜತೆ ಮಾತಾಡಿದ ಅವರು ನಮ್ಮ ಹೋರಾಟ ಈಗಾಗಲೇ ಆರಂಭವಾಗಿದೆ. ಅದನ್ನು ಪ್ರಾಂತ್ಯವ್ಯಾಪಕ ಮಾಡುವುದೇ ಈ ಯೋಜನೆ. ನ.20ರಿಂದ ಡಿ.20ರ ತನಕ ಕೇರಳದ ಎಲ್ಲಾಪಂಚಾಯತಿನಲ್ಲೂ ಜನಜಾಗೃತಿ ಸಮಾವೇಶ ನಡೆಸಿ ವಕ್ಫ್ ಕಾಯ್ದೆ ಎಂದರೇನು ಮತ್ತು ಭೂಕಬಳಿಕೆ ಯ ವಾಸ್ತವತೆಯನ್ನು ಸಾರ್ವಜನಿಕರಿಗೆ ತಿಳಿಸುವುದೇ ಆಂದೋಲನದ ಉದ್ದೇಶ ಎಂದವರು ತಿಳಿಸಿದರು.
ಅಜ್ಜ,ಮುತ್ತಜ್ಜನ ಕಾಲದಿಂದ ನಾವು ಅನುಭವಿಸಿದ ಭೂಮಿ ದಿಢೀರನೆ ವಕ್ಫ್ ಮಂಡಳಿ ನೋಟೀಸು ನೀಡಿದ ಮಾತ್ರಕ್ಕೆ ಅವರದ್ದಾಗುವುದು ಹೇಗೆ?
ಈ ಕಾನೂನನ್ನು ಸರಿಯಲ್ಲ ಎಂದು ಕೇಂದ್ರ ಸರಕಾರ ಪರಿಷ್ಕರಿಸಲು ಮುಂದಾದರೆ ನಮ್ಮಲ್ಲಿನ ಎಡರಂಗ, ಕಾಂಗೈ ನೇತೃತ್ವದ ಇಂಡೀ ಒಕ್ಕೂಟ ಅದನ್ನೇ ವಿರೋಧಿಸುವುದೇಕೆ??
ಹಾಗಿದ್ದರೆ ದೇಶದ ವಿಪಕ್ಷದ ನೈತಿಕ ಬೆಂಬಲ ಯಾರಿಗೆ? ಇದನ್ನು ಸಮಾಜದ ಮುಂದೆ ಬಿಚ್ಚಿಡುತ್ತಾ, ಹಿಂದೂ ಐಕ್ಯತೆ ರೂಪಿಸಿ ಹೋರಾಟ ನಡೆಸುವುದಷ್ಟೇ ನಮ್ಮ ಧ್ಯೇಯ ಎಂದರು ಹಿಂದೂ ಐಕ್ಯ ವೇದಿ ರಾಜ್ಯ ಕಾರ್ಯದರ್ಶಿ ಕೆ.ಪಿ. ಹರಿದಾಸ್.
ಎಡನೀರು ಶ್ರೀಗಳ ವಾಹನ ಆಕ್ರಮಣ, ದೇವಳದ ಕಳ್ಳತನ ಸಹಿತ ಸಮಕಾಲೀನ ಬೆಳವಣಿಗೆ ಕುರಿತ ಸಮಾಲೋಚನೆ ನಡೆಸಿದ ಅವರು ಶ್ರೀಮಠಕ್ಕೆ ಪರಿವಾರದ ಬೆಂಬಲ ತಿಳಿಸಿದರು. ಅವರ ಜತೆ ಹಿಂದೂ ಐಕ್ಯ ವೇದಿಕೆ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್ ಪಿ.ಶಾಜಿ, ಪ್ರ.ಕಾರ್ಯದರ್ಶಿ ರಾಜನ್ ಮುಳಿಯಾರ್ ಮತ್ತು ಪತ್ರಕರ್ತ, ಲೇಖಕ ಎಂ.ನಾ.ಚಂಬಲ್ತಿಮಾರ್ ಉಪಸ್ಥಿತರಿದ್ದರು.