ಬ್ರಹ್ಮ ಕಲಶೋತ್ಸವ ಪುಣ್ಯದ ಇಂಧನ ತುಂಬಿಸಿಕೊಳ್ಳುವ ಸುವರ್ಣಾವಕಾಶ

ಏತಡ್ಕ ಬ್ರಹ್ಮಕಲಶ ಆಮಂತ್ರಣ ಬಿಡುಗಡೆ

by Narayan Chambaltimar

ಕಣಿಪುರ ಸುದ್ದಿಜಾಲ, ಏತಡ್ಕ

ದೇವಾಲಯಗಳೆಂದರೆ ಪುಣ್ಯ ಎನ್ನುವ ಇಂಧನ ತುಂಬಿಸಿಕೊಳ್ಳುವ ತಾಣಗಳು.ಜೀವನದಲ್ಲಿ ಪಾಪ ನಿವಾರಣೆ ,ಸತ್ಕರ್ಮದ ಜಾಗೃತಿ, ಕರ್ತವ್ಯ ನಿರತೆಯನ್ನು ಎಚ್ಚರಿಸುವ ಕೇಂದ್ರಗಳು.ಅವು ಸದಾ ಬೆಳಗ ಬೇಕು.ಅವುಗಳು ಬೆಳಕು ನೀಡಬೇಕು.ಪ್ರತಿದಿನ ದೇವಾಲಯದ ಬ್ರಹ್ಮ ಕಲಶೋತ್ಸವವನ್ನು ಕಣ್ಣಮುಂದೆ ಕಾಣುತ್ತಾ ನಮ್ಮ ನಮ್ಮ ಕರ್ತವ್ಯ ಪಾಲಿಸೋಣ.” ಎಂಬುದಾಗಿ ಉದ್ಯಮಿ, ವಸಂತ ಪೈ ಅಭಿಪ್ರಾಯ ಪಟ್ಟರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

” ದೇವಸ್ಥಾನವನ್ನು ಸುಂದರಗೊಳಿಸಿ ಬ್ರಹ್ಮ ಕಲಶೋತ್ಸವದ ಆಚರಣೆಯಲ್ಲಿ ಭಾಗಿಯಾಗುವುದು ಒಂದು ಜೀವನದ ಬಹುದೊಡ್ಡ ಅವಕಾಶ.ಊರಿನ ಕ್ಷೇಮವು ಅಭೂತಪೂರ್ವವಾಗಿ ವೃದ್ಧಿಯಾಗುವುದಕ್ಕೆ , ಮಹತ್ತರ ಬದಲಾವಣೆಗಳಾಗುವುದಕ್ಕೆ ಅನೇಕ ನಿದರ್ಶನಗಳಿವೆ.ಸುಂದರತೆ , ಸುವ್ಯವಸ್ಥೆ, ಸಮೃದ್ಧಿಯ ತಾಣವಾಗುವಲ್ಲಿ ಭಕ್ತರ ಕೊಡುಗೆ ಮುಖ್ಯ ” ಎಂಬುದಾಗಿ ಎಡನಾಡು ಕ್ಷೀರೋತ್ಪಾದನಾ ಸಂಘದ ಅಧ್ಯಕ್ಷ , ಸಾಮಾಜಿಕ ಮುಂದಾಳು ಕಾರಿಂಜ ಹಳೆಮನೆ ಶಿವರಾಮ ಭಟ್ ಮುಖ್ಯ ಅತಿಥಿಗಳಾಗಿ ನುಡಿದರು.

ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ವೈ . ಶ್ಯಾಮ ಭಟ್ಟರು ಅಧ್ಯಕ್ಷತೆ ವಹಿಸಿದ್ದರು.ಸಮಿತಿಯ ಗೌರವಾಧ್ಯಕ್ಷ ಡಾ . ಏತಡ್ಕ ಸುಬ್ರಾಯ ಭಟ್, ಉಪ ಗೌರವಾಧ್ಯಕ್ಷ ವೈ.ಶಂಕರ ಭಟ್ಟ ವಿಟ್ಲ, ಬಂಟರ ಸಂಘದ ಕುಂಬ್ಳೆ ಫಿರ್ಕಾದ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಸಮಿತಿ ಖಜಾಂಜಿ ವೈ.ವಿ.ಸುಬ್ರಹ್ಮಣ್ಯ , ಜೊತೆ ಕಾರ್ಯದರ್ಶಿ ಬಾಲಕೃಷ್ಣ ಕೆಕೆ, ಕುಂಡಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಶಿಪ್ರಭಾ ವರುಂಬುಡಿ , ಸುಧಾ ಮಾಣಿತ್ತೋಡಿ, ಡಾ.ಅನ್ನಪೂರ್ಣೇಶ್ವರಿ ಏತಡ್ಕ ಇವರು ಶಿವಾರ್ಪಣಂ ಎನ್ನುವ ಬ್ರಹ್ಮ ಕಲಶೋತ್ಸವದ ಆಶಯ ಗೀತೆಯನ್ನು ಹಾಡಿದರು.ಬ್ರಹ್ಮಕಲಶೋತ್ಸವ ಸಮಿತಿಯ ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ಸ್ವಾಗತಿಸಿದರು. ಪಶುವೈದ್ಯ ಡಾ.ವೈ.ವಿ.ಕೃಷ್ಣಮೂರ್ತಿ ಬದಿಯಡ್ಕ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮ ಸಂಯೋಜಕ ಚಂದ್ರಶೇಖರ ಏತಡ್ಕ ನಿರೂಪಣೆಗೈದರು.ಕಾರ್ಯಕ್ರಮದ ಅನಂತರ ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ಕುಂಬ್ಡಾಜೆ ಪ್ರಾದೇಶಿಕ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ ಏತಡ್ಕ , ಪೆರ್ಲ ವಲಯದ ಧರ್ಮಸ್ಥಳ ಸ್ವಸಹಾಯ ಸಂಘಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಶಿವಾರ್ಪಣಂ ಶ್ರಮದಾನ ಸೇವೆ – 5 ಅಭೂತಪೂರ್ವವಾಗಿ ನಡೆಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00