47
ಕಣಿಪುರ ಸುದ್ದಿಜಾಲ, ಕಾಸರಗೋಡು:
ಅತ್ಯುತ್ತಮ ಸಂಘಟನಾ ಸಾರಥ್ಯಕ್ಕೆ ಕಾಸರಗೋಡಿನ ಪ್ರಸಿದ್ಧ ವೈದ್ಯ ಡಾ.ಬಿ.ನಾರಾಯಣ ನಾಯ್ಕ್ ಅವರಿಗೆ ಐಎಂಎ ರಾಜ್ಯಘಟಕದ ಅತ್ಯುತ್ತಮ ನಾಯಕತ್ವ ಪ್ರಶಸ್ತಿ ಸಹಿತ ಐಎಂಎ ಕಾಸರಗೋಡು ಘಟಕಕ್ಕೆ ಹಲವು ಪ್ರಶಸ್ತಿಗಳನ್ನು ನೀಡಲಾಯಿತು.
ನ.9,10ರಂದು ತ್ರಿಶ್ಶೂರಿನ ಲುಲು ಅಂತರ್ರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆದ ಐಎಂಎ ಕೇರಳ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.
ಡಾ.ಖಾಸಿ ಅವರಿಗೆ (BLS ಪ್ರೆಸಿಡೆಂಟ್ ಎಸ್ ಅಸೋಸಿಯೇಷನ್ ಪ್ರಶಸ್ತಿಯ ಅತ್ಯುತ್ತಮ ಪ್ರದರ್ಶನ), ಡಾ.ಜನಾರ್ಧನ ನಾಯ್ಕ್ (ಅಧ್ಯಕ್ಷರ ಮೆಚ್ಚುಗೆ ಪ್ರಶಸ್ತಿ), ಡಾ.ಭರತನ್ (ನಮ್ಮ ಆರೋಗ್ಯ ಐಎಂಎ ಮ್ಯಾಗಝೀನ್ ಮೆಚ್ಚುಗೆ ಪ್ರಶಸ್ತಿ). ಡಾ.ರೇಖಾ ರೈ ((WIMA ಅಧ್ಯಕ್ಷ ಮೆಚ್ಚುಗೆ ಪ್ರಶಸ್ತಿ)ಪಡೆದರು.
ಪ್ರಶಸ್ತಿಗಳನ್ನು ರಾಜ್ಯಾಧ್ಯಕ್ಷ ಡಾ.ಜೋಸ್ಫ್ ಬೆನವನ್ ಮತ್ತು ಕಾರ್ಯದರ್ಶಿ ಡಾ.ಶಶಿಧರನ್ ಕೆ ವಿತರಿಸಿದರು