ಕಾರ್ಕಳ: ಯಕ್ಷದ್ರುವ ಪಟ್ಲ ಪೌಂಢೇಶನ್ ಟ್ರಸ್ಟ್ ಮಂಗಳೂರು ಇದರ ಕಾರ್ಕಳ ಘಟಕದ ಒಂಬತ್ತನೇ ಪಟ್ಲ ಸಂಭ್ರಮವು ಯಕ್ಷ ಕಲಾರಂಗದ ಸಹಯೋಗದಲ್ಲಿ ಇದೇ ನ.16 ನೇ ಶನಿವಾರ ಸಂಜೆ ಕಾರ್ಕಳ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ಜರಗಲಿದೆ.
ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಭಾದ್ಯಕ್ಷತೆಯಲ್ಲಿ ಕಾರ್ಕಳದ ಶಾಸಕರಾದ ವಿ .ಸುನಿಲ್ ಕುಮಾರ್ ರವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ವೇದಿಕೆಯಲ್ಲಿ
ಗೌರವ ಉಪಸ್ಥಿತರಾಗಿ ಕಾರ್ಕಳದ ರಶ್ಮೀ ಕನ್ಟ್ರಕ್ಷನ್ ನ ಉದ್ಯಮಿ ಡಿ.ಆರ್. ರಾಜು , ನಿ. ಅದ್ಯಾಪಕ ಜಗದೀಶ್ ಹೆಗ್ಡೆ, ಸಾಣೂರು ಗ್ರಾ. ಪಂ ಅದ್ಯಕ್ಷ ಯುವರಾಜ್ ಜೈನ್ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಶೋತ್ತಮ ಭಂಡಾರಿ, ಕೋಶಾದ್ಯಕ್ಷ ಸಿ.ಎ.ಸುದೇಶ್ ಕುಮಾರ್ ರೈ, ಇದ್ದಾರೆ.
ಈ ಸಂಧರ್ಭದಲ್ಲಿ ಅವಿರತ
ಯಕ್ಷಗಾನ ಕಲಾಸೇವೆ ಮಾಡಿದ ಹಿರಿಯ ಕಲಾವಿದರಾದ ಕೋಟೆ ಎಸ್ ರಾಮ ಭಟ್, ಹಾಗೂ ಕಾರ್ಕಳ ರತ್ನಾಕರ ಆಚಾರ್ಯ ಇವರುಗಳನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಗುವುದು. ಸಭಾ ಸಂಭ್ರಮದ ನಂತರ ಶ್ರೀ ಜ್ನಾನಶಕ್ತಿ ಸುಬ್ರಹ್ಮಣ್ಯ ಪಾವಂಜೆ ಮೇಳದವರಿಂದ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟ ಜರಗಲಿದೆ. ಎಂದು ಪ್ರಧಾನ ಕಾರ್ಯದರ್ಶಿ ಕಾಂತಾವರ ಮಹಾವೀರ ಪಾಂಡಿ ಪ್ತತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.