ಕಾಸರಗೋಡು: ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದರ ವಾಹನ ಆಕ್ರಮಿಸಿ ಹಾನಿಗೊಳಿದ ಘಟನೆಗೆ ಸಂಬಂಧಿಸಿ ಕಂಡರೆ ಗುರುತುಹಚ್ಚಬಹುದಾದ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯಕರ್ತರಿಬ್ಬರ ಮೇಲೆ ಕೇಸು ದಾಖಲಿಸಲಾಗಿದೆ.
ಸ್ವಾಮೀಜಿ ಕಾರಿನ ಚಾಲಕ ಸತೀಶ್ ಎಡನೀರು ನೀಡಿದ ದೂರಿನಂತೆ ಕೇಸು ದಾಖಲಾಗಿದೆ.
ಪ್ರಕರಣದ ಕುರಿತು ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಹಿಂದೂ ಐಕ್ಯವೇದಿ ಆದೂರು ಠಾಣೆಯಲ್ಲಿ ದೂರು ದಾಖಲಿಸಿದೆ. ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಡಿಜಿಪಿ ಯವರಿಗೆ ಮನವಿ ಸಲ್ಲಿಸಿ ಆರೋಪಿಗಳ ವಿರುದ್ದ ಕ್ರಮಕೈಗೊಳ್ಳುವಂತೆಯೂ ಒತ್ತಾಯಿಸಿತ್ತು. ತಾಲೂಕಿನಾದ್ಯಂತ ಹಿಂದೂ ಸಂಘಟನೆಗಳಿಂದ ಪ್ರತಿಭಟನೆಯೂ ನಡೆದಿತ್ತು.
ನ.3ರಂದು ಬೋವಿಕಾನ ಸಮೀಪದ ಬಾವಿಕೆರೆಯಲ್ಲಿ ಘಟನೆ ನಡೆದಿತ್ತು. ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯಕ್ರಮದ ನಿಮಿತ್ತ ರಸ್ತೆ ನಿಯಂತ್ರಣ ಕೈಗೆತ್ತಿಕೊಂಡ ಆಸೋಸಿಯೇಷನ್ ಕಾರ್ಯಕರ್ತರು ಬೋವಿಕಾನ ಇರಿಯಣ್ಣಿ ನಡುವೆ ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಸ್ವಾಮೀಜಿಗಳಿರುವಂತೆಯೇ ವಾಹನಕ್ಕೆ ತಡೆಯೊಡ್ಡಿ ಆಕ್ರಮಿಸಿದ್ದರು.