ಕಣಿಪುರ ಸುದ್ದಿಜಾಲ, ಮುಳ್ಳೇರಿಯ(ನ.7)
ಎಡನೀರು ಮಠಾಧೀಶರ ವಾಹನ ತಡೆದು, ಆಕ್ರಮಿಸಿದ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯಕರ್ತನನ್ನು ಬಂಧಿಸಬೇಕೆಂದು ಒತ್ತಾಯಿಸಿ ಹಿಂದೂ ಐಕ್ಯವೇದಿ ಪದಾಧಿಕಾರಿಗಳು ಆದೂರು ಪೋಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.
ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು ನೇತೃತ್ವದಲ್ಲಿ ದೂರು ದಾಖಲಿಸಲಾಯಿತು. ಐಕ್ಯವೇದಿ ಜಿಲ್ಲಾಧ್ಯಕ್ಷ ಎಸ್.ಪಿ.ಷಾಜಿ, ಕಾರ್ಯದರ್ಶಿ ಮೋಹನನ್ ವಾಯಕ್ಕೊಡ್ ಕೋರನ್ ಕಾಙಂಗಾಡ್ ಎಂಬಿವರನ್ನೊಳಗೊಂಡ ನಿಯೋಗ ಎಡನೀರು ಮಠ ಸಂದರ್ಶಿಸಿ, ಸ್ವಾಮೀಜಿಯವರನ್ನು ಭೇಟಿ ಮಾಡಿದ ಬಳಿಕ ಆದೂರು ಠಾಣೆಗೆ ತೆರಳಿ ದೂರು ಸಲ್ಲಿಸಿದರು.
ಅನುಮತಿ ಪಡೆಯದೇ ರಸ್ತೆ ಸಂಚಾರಕ್ಕೆ ತಡೆಯೊಡ್ಡಿ, ಸಾರ್ವಜನಿಕ ಸಂಚಾರಕ್ಕೆ ತೋಂದರೆ ಸೃಷ್ಠಿಸಿ, ಎಡನೀರು ಮಠಾಧೀಶರ ವಾಹನ ಆಕ್ರಮಿಸಿದ ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಹಿಃದೂ ಐಕ್ಯವೇದಿ ಒತ್ತಾಯಿಸಿದೆ. ಇದೇ ಬೇಡಿಕೆಯೊಂದಿಗೆ ಘಟನೆಯನ್ನು ಖಂಡಿಸಿ ನ.6ರಂದುವ ಐಕ್ಯವೇದಿ ನೇತೃತ್ವದಲ್ಲಿ ಬೋವಿಕಾನದಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು.
ರಸ್ತೆ ತಡೆ ನಿರ್ಮಿಸಿ ನಿಯಂತ್ರಣಾಧಿಕಾರ ಕೈಗೆತ್ತಿಕೊಳ್ಳಲು ಅಧಿಕಾರ ಇತ್ತವರಾರು ಎಂದು ಪ್ರಶ್ನಿಸಿದ ಹಿಂದೂ ಐಕ್ಯ ವೇದಿ ಎಡನೀರು ಸ್ವಾಮೀಜಿಯವರು ವಾಹನದಲ್ಲಿರುವಂತೆಯೇ ಉದ್ದೇಶಪೂರ್ವಕ ವಾಹನ ಆಕ್ರಮಿಸಲಾಗಿದೆ. ಘಟನೆಯನ್ನು ಸ್ವಾಮೀಜಿ ಮನ್ನಿಸಿದರೂ ಹಿಂದೂ ಐಕ್ಯವೇದಿ ಮನ್ನಿಸುವುದಿಲ್ಲ. ಆರೋಪಿಯ ಬಂಧನವಾಗಿ, ಆತ ಕ್ಷಮೆ ಕೋರಲೇಬೇಕೆಂದು ಐಕ್ಯವೇದಿ ಒತ್ತಾಯಿಸಿದೆ.