86
ಮುಳ್ಳೇರಿಯ : ಸುಳ್ಯ ತಾಲೂಕಿನ ಆಲೆಟ್ಟಿಯ ಕಲ್ಲೆಂಬಿ ಎಂಬಲ್ಲಿ ಕಾನೂನು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ
ಕಲ್ಲೆಂಬಿ ಸ್ಥಾನದ ಮನೆಯ ರಾಘವ ಬೆಳ್ಚಪ್ಪಾಡರ ಮಗ ಮಿಥುನ್ ರಾಜ್ (26( ಎಂಬಾತ ಇಂದು ಸಂಜೆ ಆತ್ಮಹತ್ಯೆಗೈದನು
ಸುಳ್ಯ ಕೆ.ವಿ ಜಿ ಕಾನೂನು ವಿದ್ಯಾಲಯದ ವಿದ್ಯಾರ್ಥಿಯಾದ ಈತ ಇಂದು ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಡುಗೆ ಕೋಣೆಯ ಮಾಡಿನ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಗೈದನು. ಸುಳ್ಯ ಪೋಲೀಸರು ಬಂದು ಮೃತದೇಹದ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ. ಮೃತರು ತಾಯಿ ಪ್ರಸನ್ನ ಕುಮಾರಿ, ಸಹೋದರ ಪ್ರಜಿತ್, ಸಹೋದರಿ ಮಾಯಶ್ರೀ , ಬಂಧುಬಳಗವನ್ನಗಲಿದ್ದಾರೆ.