ಕೇರಳಕ್ಕೆ ನೂತನ 10 ನಮೋಭಾರತ್ ಮೆಟ್ರೋ ರೈಲು ಮಂಜೂರು: ಕೋಝಿಕ್ಕೋಡ್ -ಮಂಗಳೂರು ಇಂಟರ್ಸಿಟಿ ನಡುವೆ ಸಂಚಾರ ಕ್ರಾಂತಿಯ ನವಯುಗ?

by Narayan Chambaltimar

ಕಣಿಪುರ ಸುದ್ದಿಜಾಲ , ನವಂಬರ್ (6) ದೆಹಲಿ:

ಕೇರಳದಲ್ಲಿ ವಂದೇಭಾರತ್ ರೈಲು ಪಡೆದ ಜನಪ್ರಿಯತೆ ಮತ್ತು ಯಶಸ್ಸು ಗಮನಿಸಿ ಹೆಚ್ಚುವರಿಯಾಗಿ ಕೇರಳಕ್ಕೆ 10ನೂತನ ವಂದೇಭಾರತ್ ಮೆಟ್ರೋ ರೈಲುಗಳನ್ನು ಮಂಜೂರು ಮಾಡಲಾಗಿದೆ. ವಂದೇಭಾರತ್ ಮೆಟ್ರೋ ಅಥವಾ ನಮೋಭಾರತ್ ರೈಲು ಪ್ರಾದೇಶಿಕವಾದ ಮಹಾನಗರಗಳನ್ನವಲಂಬಿಸಿ ಓಡಾಡಲಿದೆ.

ಕೇರಳದ ವಿಫುಲ ಪ್ರವಾಸೋದ್ಯಮ ಸಾಧ್ಯತೆ ಮನಗಂಡು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಅತ್ಯಾಧುನಿಕ ವಿನ್ಯಾಸದ ಡಿಲಕ್ಸ್ ರೈಲುಗಳನ್ನು ರಾಜ್ಯಕ್ಕೆ ನೀಡಲಾಗಿದೆ. ಇದು ಮಹಾನಗರಗಳನ್ನು ಜೋಡಿಸಲಿದ್ದು ಸಂಚಾರಕ್ರಾಂತಿಯ ಹೊಸ ಅಧ್ಯಾಯ ತೆರೆಯಲಿದೆ.

ಕನಿಷ್ಠ ಟಿಕೆಟ್ ದರ 30ರೂ ಎಂಬುದೇ ಇದರ ವೈಶಿಷ್ಟ್ಯ. ಗಂಟೆಗೆ 130ಕೀ.ಮೀ.ವೇಗದಲ್ಲಿ ಓಡುವ ಈ ರೈಲು ಸಂಪೂರ್ಣ ಹವಾನಿಯಂತ್ರಿತ ಮತ್ತು ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲು ಹಾಗೂ ಸಿಸಿಟಿವಿ ಕ್ಯಾಮರಾ ಹೊಂದಿದೆ.

ಭಾರತದಲ್ಲಿ ಕ್ಷಿಪ್ರ ಸಾರಿಗೆ ಅಭಿವೃದ್ಧಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಮೆಟ್ರೋ ಸಿಟಿಗಳ ನಡುವೆ ಸಂಚರಿಸುವುದು ಇದರ ಉದ್ದೇಶ. ಕೇರಳಕ್ಕೆ 10ರೈಲುಗಳು ಮಂಜೂರುಗೊಂಡ ಕಾರಣ ಮಂಗಳೂರು -ಕೋಝಿಕ್ಕೋಡ್ ನಡುವಣ ಸಾರಿಗೆ ದಟ್ಟಣೆ ಹಾಗೂ ರೈಲಿನ ಕೊರತೆಯ ಸಮಸ್ಯೆಯನ್ನಿದು ನೀಗಸಲಿದೆ ಎಂದು ನಿರೀಕ್ಷಿಸಲಾಗಿದೆ. ಕೋಝಿಕ್ಕೋಡ್ -ಮಂಗಳೂರು ನಡುವೆ ಇಂಟರ್ಸಿಟಿ ಮೆಟ್ರೋ ರೈಲು ಓಡಾಡಿದರೆ ರಸ್ತೆಯ ವಾಹನ ದಟ್ಟಣೆಯೂ ನಿಯಂತ್ರಣವಾಗಲಿದೆ. ದೈನಂದಿನ ಸಾವಿರಾರು ಪ್ರಯಾಣಿಕರು ನೂರಾರು ಕಿ.ಮೀ. ನಿಂತೇ ಪ್ರಯಾಣಿಸುವ ಯಾತನೆಯುಳ್ಳ ಈ ರೂಟಿನಲ್ಲಿ ವಂದೇ ಮೆಟ್ರೋ ಓಡಾಡಿದರೆ ಮಲಬಾರಿನ ಸಂಪರ್ಕ ಕ್ರಾಂತಿಯ ಹೊಸ ಯುಗ ಉದಯವಾಗಲಿದೆ.

ಹಾಗೆಯೇ ವಿಫುಲ ಪ್ರವಾಸೋದ್ಯಮ ಕೇಂದ್ರಗಳಿರುವ ಕೇರಳ -ಕರ್ನಾಟಕದ ಸಾಂಸ್ಕೃತಿಕ ನಕಾಶೆಯಲ್ಲೂ ಇದು ಅಭ್ಯುದಯದ ಬಾಗಿಲು ತೆರೆಯಲಿದೆ. ಮಂಗಳೂರು -ಕಲ್ಲಿಕೋಟೆ ರೂಟಿನಲ್ಲಿ ಐಷಾರಾಮಿ ರೈಲುಗಳಲ್ಲದಿದ್ದರೂ ಕನಿಷ್ಠ ಪ್ಯಾಸೆಂಜರ್ ರೈಲುಗಳನ್ನಾದರೂ ಓಡಿಸಬೇಕೆಂಬುದು ಪ್ರಯಾಣಿಕರ ಬಹುಕಾಲದ ಬಯಕೆಯಾಗಿತ್ತು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00