ಲಾಡ್ಜಿಗೆ ಕರೆಸಿ 9ಬಾರಿ ಅತ್ಯಾಚಾರ: ವಿವಾಹ ಭರವಸೆಯಿತ್ತು ವಂಚಿಸಿದ ಯುವಕನ ಬಂಧನ

by Narayan Chambaltimar

ಕಾಸರಗೋಡು: ಸಾಮಾಜಿಕ ಜಾಲತಾಣ ಮೂಲಕ ಪರಿಚಯಗೊಂಡ ಯುವತಿಯ ಗೆಳೆತನ ಬೆಳೆಸಿ, ಸ್ನೇಹ ನಟಿಸಿ, ವಿವಾಹದ ಭರವಸೆಯಿತ್ತು ಸತತ ಲೈಂಗಿಕ ದೌರ್ಜನ್ಯ ನಡೆಸಿ ವಂಚಿಸಿದಾತನನ್ನು ಬಂಧಿಸಲಾಗಿದೆ. ಕಾಞಂಗಾಡು ಮಾಣಿಕೋತ್ತ್ ನಿವಾಸಿ ಮುಹಮ್ಮದ್ ಸೈನಾ(23)ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.

ಕಣ್ಣೂರು ಜಿಲ್ಲೆಯ ಮಟ್ಟನ್ನೂರು ಮೂಲದ ಯುವತಿಯ ದೂರಿನಂತೆ ಹೊಸದುರ್ಗ ಪೋಲೀಸರು ಆರೋಪಿಯನ್ನು ಸೆರೆ ಹಿಡಿದರು.

ಸೋಷ್ಯಲ್ ಮೀಡಿಯ ಮೂಲಕ ಪರಿಚಯಗೊಂಡ ಯುವತಿಯ ಗೆಳೆತನ ಬೆಳೆಸಿದ ಆರೋಪಿ ಆಕೆಯನ್ನು ಕಾಞಂಗಾಡಿಗೆ ಕರೆಸಿ ಸುತ್ತಾಟ ನಡೆಸಿ, ಒಂದೇ ಲಾಡ್ಜ್ ನಲ್ಲಿ ಸತತ 9ಬಾರಿ ಜತೆಗೆ ವಾಸಿಸಿ ಅತ್ಯಾಚಾರ ನಡೆಸಿದ್ದಾನೆಂದು ಯುವತಿ ದೂರು ನೀಡಿದ್ದಳು. ಮದುವೆಯ ಆಮಿಷವೊಡ್ಡಿ ಈ ಕೃತ್ಯ ಎಸಗಿದ್ದಾನೆಂದೂ, 9ಬಾರಿ ಲಾಡ್ಜ್ ಪಡೆಯಲು ಒಂದೇ ಗುರುತು ಚೀಟಿ ಬಳಸಿದ್ದಾನೆಂದೂ ಪೋಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಈತನಿಗೆ ವಾಹನ ಒದಗಿಸಿ ಸಹಾಯ ಮಾಡಿದ ಇನ್ನೋರ್ವ ಆರೋಪಿ ಇಂತಿಯಾಸ್ ಎಂಬಾತ ವಿದೇಶಕ್ಕೆ ತೆರಳಿದ್ದಾನೆಂದೂ, ಆತನ ಬಂಧನವೂ ನಡೆಯಲಿದೆಯೆಂದು ಪೋಲೀಸರು ತಿಳಿಸಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00