330
ಕಣಿಪುರ ಸುದ್ದಿಜಾಲ, ಮಾನ್ಯ(ನ.4)
- ಕಾಸರಗೋಡು ತಾಲೂಕಿನ ದೈವಸ್ಥಾನ, ಭಜನಾ ಮಂದಿರ, ದೇವಾಲಯಗಲ್ಲಿ ಕಳ್ಳತನ ವ್ಯಾಪಕವಾಗತೊಡಗಿದೆ.
ನಿನ್ನೆ ಆದಿತ್ಯವಾರ ರಾತ್ರಿ ಮಾನ್ಯ ಅಯ್ಯಪ್ಪ ಮಂದಿರಕ್ಕೆ ನುಗ್ಗಿದ ಕಳ್ಳರು ಅಯ್ಯಪ್ಪನ ರಜತ ವಿಗ್ರಹ ಸಹಿತ ಕಾಣಿಕೆ ಡಬ್ಬಿ ಕದ್ದೊಯ್ದಿದ್ದಾರೆ.
ನಿನ್ನೆ ರಾತ್ರಿ 1ಗಂಟೆಯ ಬಳಿಕ ಈ ಕಳ್ಳತನ ನಡೆದಿದೆ. ಮಂದಿರದ ಮುಂಭಾಗದ ಬಾಡಿಗೆ ಮನೆಗಳಿಗೆ ಹೊರಭಾಗದಿಂದ ಬೀಗಜಡಿದು, ಬೆಳ್ಳಿಯಲ್ಲಿ ಮೆತ್ತಿಸಿದ ಅಯ್ಯಪ್ಪನ ವಿಗ್ರಹ ಮಾದರಿಯ ಛಾಯಾಫಲಕವನ್ನು ಕದ್ದೊಯ್ಯಲಾಗಿದೆ. ಇದಕ್ಕೆ ಸುಮಾರು 4ಲಕ್ಷಕ್ಕೂ ಅಧಿಕ ಮೌಲ್ಯ ಅಂದಾಜಿಸಲಾಗಿದೆ. ಈ ಸಂಬಂಧ ಬದಿಯಡ್ಕ ಪೋಲೀಸರಿಗೆ ನೀಡಿದ ಮಾಹಿತಿಯಂತೆ ಪೋಲೀಸರು ಬೆಳಿಗ್ಗೆ ಸ್ಥಳಕ್ಕಾಗಮಿಸಿ ಕೇಸು ದಾಖಲಿಸಿದ್ದಾರೆ.
ಇದೇ ರೀತಿ ಶನಿವಾರ ರಾತ್ರಿ ಎಡನೀರು ಮಠದ ಆಧೀನಕ್ಕೊಳಪಟ್ಟ, ಮಠದ ಸಮೀಪದಲ್ಲಿರುವ ವಿಷ್ಣುಮಂಗಲ ದೇವಳದ ಬಾಗಿಲು ಮುರಿದು ಕಾಣಿಕೆ ಡಬ್ಬಿಯನ್ನು ಕದ್ದೊಯ್ಯಲಾಗಿದೆ. ಕಾಸರಗೋಡು ತಾಲೂಕಿನ ಹಲವೆಡೆ ಇತ್ತೀಚೆಗೆ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಸರಣಿ ಕಳ್ಳತನವಾಗುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೋಲೀಸ್ ತನಿಖೆ ನಿಷ್ಕ್ರಿಯತೆಯಿಂದ ವಿಫಲವಾಗುತ್ತಿದೆಯೆಂದು ನಾಗರಿಕರು ಹತಾಶೆಯಲ್ಲಿದ್ದಾರೆ.