47
ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಉಪ್ಪಳ ಭಾಗಕ್ಕೆ ನಿಷೇಧಿತ ಹಡ್ರೋವಿಡ್ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯನ್ನು ಲಕ್ಷಾಂತರ ಮೌಲ್ಯದ ಭಾರೀ ಪ್ರಮಾಣದ ಗಾಂಜಾ ಸಹಿತ ಬಂಧಿಸಲಾಗಿದೆ.
ಮೂಲತಃ ಪುತ್ತೂರು ನಿವಾಸಿ ಮಂಗಳೂರು ತೊಕ್ಕೊಟ್ಟು ಬಳಿಯ ಚೆಂಬುಗುಡ್ಡೆಯಲ್ಲಿ ವಾಸಿಸುವ ಎಚ್. ಮುಹಮ್ಮದ್ ಹಫೀಜ್ (23) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ.
ಮಂಗಳೂರು ನಗರಕ್ಕೆ ಥಾಯ್ಲೇಂಡಿನಿಂದ ಲಕ್ಷಾಂತರ ಮೌಲ್ಯದ ನಿಷೇಧಿತ ಗಾಂಜಾ ಪೂರೈಕೆಯಾಗುವ ಸುಳಿವು ದೊರೆತ ಹಿನ್ನೆಲೆಯಲ್ಲಿ ಗುಪ್ತ ಮಾಹಿತಿಗಳಿಂದ ಸಾಗಾಟ, ಮಾರಾಟ ಮಾಡುವಾತನನ್ನು ಗುರುತಿಸಿದ ಸಿಸಿಬಿ ಪೋಲೀಸರು ಕುದ್ರೋಳಿಯಿಂದ ಆರೋಪಿಯನ್ನು ಬಂಧಿಸಿದರು.
ಈತನ ಬಳಿಯಿಂದ ದಾಸ್ತಾನಿರಿಸಿದ್ದ 30ಲಕ್ಷ ರೂ ಮೌಲ್ಯದ 300ಗ್ರಾಂ ಹೈಡ್ರೋವಿಡ್ ಗಾಂಜಾ, 75 ಸಾವಿರ ಮೌಲ್ಯದ 2.5 ಕಿಲೋ ಗಾಂಜಾ, ಡಿಜಿಟಲ್ ತಕ್ಕಡಿ, ಮೊಬೈಲ್ ವಶಪಡಿಸಲಾಗಿದೆ.
ಒಟ್ಟು 30, 85,500ರೂ ಸೊತ್ತು ವಶಪಡಿಸಲಾಗಿದೆ.