ಬೆದ್ರಡ್ಕ ಬಳಿಯ ದೇಶಮಂಗಲದ ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಮಂದಿರದ ಆವರಣದಲ್ಲಿರುವ ಓಂಕಾರ ಧ್ವಜಸಹಿತವಾದ ಧ್ವಜಸ್ತಂಭವನ್ನು ಬುಧವಾರ ರಾತ್ರಿ ಮುರಿದ ಕಿಡಿಗೇಡಿಗಳು ಧ್ವಜ ನಾಶಕ್ಕೆ ವಿಫಲಯತ್ನ ನಡೆಸಿದ್ದಾರೆ.
ಭಜನಾ ಮಂದಿರದ ಮುಂಬಾಗದಲ್ಲಿ ಕಬ್ಬಿಣದ ಸ್ತಂಭದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು . ಬುಧವಾರ ರಾತ್ರಿ ಧ್ವಜಸ್ತಂಭವನ್ನು ಬಗ್ಗಿಸಿ ನೆಲದ ಸಮಾಂತರಕ್ಕೆ ತಂದ ಸ್ಥಿತಿಯಲ್ಲಿರಿಸಿ ಓಂಕಾರ ಧ್ವಜವನ್ನು ಏನೂ ಮಾಡಲಾಗದೆ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಕಿಡಿಗೇಡಿಗಳು ಪರಾರಿಯಾಗುವ ವೇಳೆ ದ್ವಿಚಕ್ರ ವಾಹನ ಬಿದ್ದ ಕುರುಹುಗಳು ಸ್ಥಳದಲ್ಲಿ ಪತ್ತೆಯಾಗಿದೆ. ಕಿಡಿಗೇಡಿಗಳು ಕೃತ್ಯವೆಸಗುವ ವೇಳೆ ಶ್ರೀಗುಳಿಗ ದೈವದ ಪ್ರಭಾವದಿಂದ ಕಾಲ್ಕಿತ್ತಿರಬಹುದೆಂದು ಇಲ್ಲಿನ ಭಕ್ತರು ಅಭಿಪ್ರಾಯಪಡುತ್ತಾರೆ.
ಸ್ಥಳದಲ್ಲಿ ಶ್ರೀ ಕಾಳಿಕಾ ವಿಶ್ವಕರ್ಮ ದೇವರ ಸಾನಿಧ್ಯದ ಜತೆಗೆ ಶ್ರೀನಾಗ ಮತ್ತು ಶ್ರೀಗುಳಿಗ ದೈವವನ್ನು 1982ರಿಂದ ಆರಾಧಿಸಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿದು ಮೊಗ್ರಾಲ್ ಪುತ್ತೂರು ಪಂಚಾಯತ್ ಸದಸ್ಯರಾದ ಪ್ರಮೀಳ ಮಜಲ್, ಉದಯ ಅಮ್ಚಿಕೆರೆ , ಮುಜೀಬ್ ಕಂಬಾರು ವಿವಿಧ ಪಕ್ಷಗಳ ನೇತಾರರಾದ ಕುಂಞಿರಾಮನ್ ಮಜಲ್, ರಫೀಕ್ ಕಂಬಾರು, ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಸ್ಥಳವನ್ನು ಸಂದರ್ಶಿಸಿ ಘಟನೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಭಜನಾ ಮಂದಿರದ ಪದಾಧಿಕಾರಿಗಳು ಘಟನೆಗೆ ಸಂಬಂದಿಸಿ ತಪ್ಪಿಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಲು ಕಾನೂನುಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಕಾಸರಗೋಡು ಜಿಲ್ಲಾಧಿಕಾರಿ, ಉಪವಿಭಾಗೀಯ ದಂಡಾಧಿಕಾರಿ ಹಾಗೂ ಕಾಸರಗೋಡು ಪೋಲೀಸ್ ಠಾಣಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ.
ತಿಭಟನಾ ಸಭೆ: ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಒಕ್ಕೊರಲ ಒತ್ತಾಯ ನಡೆಸಿ
ಸಂಜೆ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಂದಿರದ ಸ್ಥಾಪಕ ಪದಾಧಿಕಾರಿ ಎಂ.ಪುರುಷೋತ್ತಮ ಆಚಾರ್ಯ ಕಂಬಾರು, ಶ್ರೀ ಆಂಜನೇಯ ಕ್ಷೇತ್ರದ ಶ್ರೀ ಆಂಜನೇಶ್ವರ ಸ್ವಾಮೀಜಿ ದೇಶಮಂಗಲ, ಪಂಚಾಯತ್ ಸದಸ್ಯರಾದ ಉದಯ ಅಮ್ಚಿಕೆರೆ, ಸಂಪತ್ ಪೆರ್ನಡ್ಕ , ಪ್ರಸನ್ನ ಕಾರಂತ ದೇಶಮಂಗಲ , ಲೋಕೇಶ್ ಎಂ.ಬಿ ಆಚಾರ್ ಕಂಬಾರು, ಚಂದ್ರಶೇಖರ ಬಳ್ಳೂರು, ಭುವನೇಶ್ ಆಚಾರ್ಯ ತಾಳಿಪಡ್ಪು ಇವರು ಘಟನೆಯನ್ನು ಖಂಡಿಸಿ ಮಾತನಾಡಿದರು.
ದೇಶಮಂಗಲ ಪ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಮೊದಲ ಘಟನೆಯು ಇದಾಗಿದ್ದು ತಪ್ಪಿತಸ್ತರನ್ನು ತಕ್ಷಣ ಬಂಧಿಸಿ ಶಿಕ್ಷಿಸುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಧೂರು ಶ್ರೀ ಕಾಳಿಕಾಂಬಾ ಮಠದ ಕಾರ್ಯದರ್ಶಿ ತಾರನಾಥ ಆಚಾರ್ಯ ಮಧೂರು, ಕೋಶಾಧಿಕಾರಿ ಯೋಗೇಂದ್ರ ಆಚಾರ್ಯ ಪರಕ್ಕಿಲ, ಉಪೇಂದ್ರ ಆಚಾರ್ಯ ದೇಶಮಂಗಲ, ಕೆ ವಿ ದೇವದಾಸ ಆಚಾರ್ಯ ದೇಶಮಂಗಲ, ಗಿರೀಶ್ ಮಜಲು, ರಾಮಕೃಷ್ಣ ರೈ ಕೋಟೆಕುಂಜ, ಸುಬ್ರಹ್ಮಣ್ಯ ಕಾರಂತ ದೇಶಮಂಗಲ, ಗಣೇಶ್ ನಾಯಕ್ ಬಳ್ಳೂರು, ಜಯರಾಮ ರೈ ತ್ರಿನೇತ್ರ, ಬಾಲಕೃಷ್ಣ ಶೆಟ್ಟಿ ನೀರಾಳ, ಉಮೇಶ್ ಪೂಜಾರಿ ದೇಶಮಂಗಲ, ಪ್ರಿಯಾ ನಾಯಕ್ ಶಾಸ್ತಾ ನಗರ, ಲೀಲಾ ಅಶೋಕ್ ಆಚಾರ್ಯ ಮಠ,ಉದಯ ಕುಮಾರ್ ದೇಶಮಂಗಲ, ಪ್ರಶಾಂತ್ ದೊಡ್ಡ ಹಿತ್ತಿಲು, ಶ್ರೀಧರ ದೊಡ್ಡ ಹಿತ್ತಿಲು, ಮೋಹನ ಆಚಾರ್ಯ ಬಂಗ್ರ ಮಂಜೇಶ್ವರ, ಅನಂತ ಪದ್ಮನಾಭ ಕೂಡ್ಲು, ಅರವಿಂದ ಕಾರಂತ್ ದೇಶಮಂಗಲ, ಡಿ ದೇವದಾಸ ಆಚಾರ್ಯ ದೇಶಮಂಗಲ, ರಾಮಕೃಷ್ಣ ಆಚಾರ್ಯ ಮಠ, ರಾಜೇಶ್ ಆಚಾರ್ಯ ಮನ್ನಿಪಾಡಿ, ಪ್ರಮೋದ್ ಆಚಾರ್ಯ ಬದಿಯಡ್ಕ, ವರಪ್ರಸಾದ್ ಆಚಾರ್ಯ ಕಂಬಾರು, ಬಾಲಕೃಷ್ಣ ಶೆಟ್ಟಿ ಬಳ್ಳೂರು, ರಾಮಚಂದ್ರ ದೇವಾಡಿಗ ಬೆದ್ರಡ್ಕ,ದೇಶಮಂಗಲ ಶ್ರೀ ಕಾಳಿಕಾ ವಿಶ್ವಕರ್ಮ ಸೇವಾ ಸಂಘ, ಶ್ರೀ ಕಾಳಿಕಾ ವಿಶ್ವಕರ್ಮ ಮಾತೃ ಸಂಘ, ಸಮಜ್ಞ ಸಂಸ್ಥೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಮಂತಾದವರು ನೇತೃತ್ವ ನೀಡಿದರು. ಸಭೆಯ ಆಧ್ಯಕ್ಷತೆಯನ್ನು ಮಂದಿರದ ಅಧ್ಯಕ್ಷ ನರೇಂದ್ರ ಆಚಾರ್ಯ ದೇಶಮಂಗಲ ವಹಿಸಿದ್ದರು. ಜಗದೀಶ್ ಆಚಾರ್ಯ ಕಂಬಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೆ. ನಾರಾಯಣ ಆಚಾರ್ಯ ಕಂಬಾರು ವಂದಿಸಿದರು. ಬಳಿಕ ಪಂಜಿನ ಮೆರವಣಿಗೆ ನಡೆಸಿ ಶ್ರೀಗುಳಿಗ ದೈವ ಸಾನಿಧ್ಯದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.