ದೇವಾಲಯಕ್ಕೆ ಕೊಡುವುದು ದಾನ ದೇಣಿಗೆಯಲ್ಲ, ಅರ್ಪಣೆ: ಉದ್ಯಮಿ ಎಡಕ್ಕಾನ ಮಹಾಬಲ ಭಟ್

ಏತಡ್ಕ ಸದಾಶಿವ ದೇವಾಲಯದ ಶಿವಾರ್ಪಣಂ ದ್ವಿತೀಯ ಹಂತ ಉದ್ಘಾಟನೆ

by Narayan Chambaltimar

 

ಏತಡ್ಕ : ” ದುಡಿದು ಸಂಪಾದಿಸಿದ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ಹಿಂತಿರುಗಿಸುವುದರಿಂದ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ.ಹಾಗೇ ದೇವಾಲಯಗಳಿಗೆ ನಾವು ನೀಡುವ ತನು, ಮನ, ಧನ ದಾನಗಳು ಅರ್ಪಣೆಯಾಗ ಬೇಕು, ಅವುಗಳು ದೇಣಿಗೆ ಎನಿಸಬಾರದು. ನಾಡಿನ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡ ಬೇಕಾಗಿದೆ.ಆಧುನಿಕ ಯುಗದಲ್ಲಿ ಭಕ್ತರು ಇದನ್ನು ಬಯಸುತ್ತಾರೆ. ಈ ದೇವಾಲಯದ ‘ಶಿವಾರ್ಪಣಂ ‘ ಯೋಜನೆಯು ಬ್ರಹ್ಮಕಲಶೋತ್ಸವಕ್ಕೆ ಸೀಮಿತವಾಗಿರದೆ ನಿರಂತರವಾಗಿ ನಡೆಯಲಿ” ಎಂಬುದಾಗಿ ಉದ್ಯಮಿ, ಸಮಾಜ ಪ್ರೇರಕ ಎಡಕ್ಕಾನ ಮಹಾಬಲೇಶ್ವರ ಭಟ್ ಹಾರೈಸಿದರು. ಅವರು ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ -25 ಸಂದರ್ಭದಲ್ಲಿ ಶಿವಾರ್ಪಣಂ ದ್ವಿತೀಯ ಶ್ರಮದಾನ ಸೇವೆ ಉದ್ಘಾಟಿಸಿ ಹಾರೈಸಿದರು.

ಸಾಂಕೇತಿಕವಾಗಿ ದೇವಾಲಯದ ಹಳೆಯ ಹಂಚಿನ ಮೇಲೆ ವೇಗವಾಗಿ ನೀರಿನ ಸಿಂಚನ ( ಸ್ಪ್ರೇ) ಮಾಡಿ ಶ್ರಮದಾನಿಗಳನ್ನು ಉತ್ತೇಜಿಸಿದರು.
ಸಭಾ ವೇದಿಕೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ಹಾಗು ಕಾರ್ಯದರ್ಶಿ ಡಾ . ಪ್ರಕಾಶ್ ವೈ.ಎಚ್. ಉಪಸ್ಥಿತರಿದ್ದರು.
ಸಮಿತಿಯ ಪದಾಧಿಕಾರಿಗಳಾದ ಡಾ.ವೈ.ವಿ.ಕೃಷ್ಣಮೂರ್ತೀ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.ಇನ್ನೋರ್ವ ಸಮಿತಿಯ ಸಂಯೋಜಕ ಚಂದ್ರಶೇಖರ ಏತಡ್ಕ ಧನ್ಯವಾದಗಳನ್ನು ನೀಡಿದರು.
ಊರಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಶಿವಾರ್ಪಣಂ ಶ್ರಮದಾನ ಸೇವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00