ಶೀಘ್ರವೇ ಎಳನೀರಿನ ವೈನ್ ಮಾರುಕಟ್ಟೆಗೆ : ದೇಶದಲ್ಲೇ ಮೊದಲು ಕಾಸರಗೋಡಿನ ರೈತನ ಸಾಧನೆ

by Narayan Chambaltimar

 

ಕಾಸರಗೋಡು: ವೈನ್​ ಎಂದರೆ ಸಾಮಾನ್ಯವಾಗಿ ನೆನಪಿಗೆ ಬರುವುದು ದ್ರಾಕ್ಷಿ. ಆದರೆ, ಇದೀಗ ಮಾರುಕಟ್ಟೆಯಲ್ಲಿ ಕೇವಲ ದ್ರಾಕ್ಷಿಯಲ್ಲದೇ ಗೋಡಂಬಿ ಸೇರಿದಂತೆ ತರಹೇವಾರಿ ವೈನ್​ಗಳಿವೆ. ಈ ಸಾಲಿಗೆ ಹೊಸ ಸೇರ್ಪಡೆ ಎಳನೀರ ವೈನ್​.ಇದು ಅಚ್ಚರಿಯಾದರೂ ಹೌದು. ಕಲ್ಪವೃಕ್ಷದಲ್ಲಿ ದೊರೆಯುವ ಎಳನೀರಿನಿಂದ ವೈನ್​ ತಯಾರಿಸಿ, ತಮ್ಮ 20 ವರ್ಷದ ಕನಸು ನನಸು ಮಾಡಿಕೊಂಡಿದ್ದಾರೆ ತಹಶೀಲ್ದಾರ್ ಆಗಿ ನಿವೃತ್ತಿ ಹೊಂದಿ ಇದೀಗ ಕೃಷಿಯಲ್ಲಿ ತೊಡಗಿರುವ ಪ್ರಗತಿಪರ ರೈತ ಸೆಬಾಸ್ಟಿಯನ್ ಪಿ.ಅಗಸ್ಟಿನ್​.

ಕಾಸರಗೋಡು ಜಿಲ್ಲೆಯ
ಭೀಮನಡಿಯ ಸೆಬಾಸ್ಟಿಯನ್ ಪಿ.ಅಗಸ್ಟಿನ್ ಈ ಅವಿಷ್ಕಾರ ಮಾಡಿದ ದೇಶದ ಮೊದಲ ರೈತರಾಗಿದ್ದು, ಇವರು ತಮ್ಮ ವಿಶೇಷ ವೈನ್​ ಉತ್ಪಾದನೆಗೆ ಸುದೀರ್ಘ ಕಾನೂನು ಹೋರಾಟವನ್ನೂ ನಡೆಸಿದ್ದಾರೆ. ಇದರ ಫಲವಾಗಿ ವೈನ್‌ ತಯಾರಿಕೆಗಾಗಿ ಅಬಕಾರಿ ಇಲಾಖೆಯಿಂದ ಲೈಸನ್ಸ್​ ಪಡೆದಿದ್ದಾರೆ.

ಇದು ಸುದೀರ್ಘ ಕಾಲದ ಪ್ರಯೋಗ, ಪ್ರಯತ್ನಗಳ ಫಲ. ನಾನು ಈ ವೈನ್​ ಅನ್ನು ಎಳನೀರಿನಿಂದ ತಯಾರಿಸುತ್ತಿದ್ದೇನೆ. ಇದನ್ನು ತಯಾರಿಸುವ ವಿಧಾನದ ಕುರಿತು ಸಾಕಷ್ಟು ಕಡೆ ಪ್ರದರ್ಶನ ನೀಡಿದ್ದೇನೆ. ಹೀಗಾಗಿ ಇಲಾಖೆಯಿಂದ ಅನುಮತಿ ಪಡೆದೆ” ಎಂದು ಸೆಬಾಸ್ಟಿಯನ್​ ಹೇಳುತ್ತಾರೆ. ಶೀಘ್ರದಲ್ಲೇ ಎಳನೀರಿನ ವೈನ್​ ಮಾರುಕಟ್ಟೆಗೆ ಬರಲಿದೆ ಎಂದು ಇದೇ ವೇಳೆ ಹೇಳಿದರು.

2004ರಲ್ಲಿ ಮೊದಲ ಬಾರಿಗೆ ಇವರಿಗೆ ಎಳನೀರಿನಿಂದ ವೈನ್​ ತಯಾರಿಸುವ ಆಲೋಚನೆ ಹುಟ್ಟಿಕೊಂಡಿತಂತೆ. ಇದರ ಪರವಾಗಿ ಶ್ರಮಿಸಿದ ಇವರಿಗೆ 20 ವರ್ಷಗಳ ಬಳಿಕ ಈ ಅನುಮತಿ ಸಿಕ್ಕಿದೆ.ಸೆಬಾಸ್ಟಿಯನ್​ ಕೃಷಿಯಲ್ಲಿ ಮಾಡಿರುವ ಅನೇಕ ಸಾಧನೆಗಳಿಗೆ ಈಗಾಗಲೇ ಹಲವು ಪ್ರಶಸ್ತಿಗಳು ಬಂದಿವೆ.ಸೆಬಾಸ್ಟಿಯನ್ ತಾವು ತಯಾರಿಸುತ್ತಿರುವ​ ವೈನ್​ಗೆ ಎಳನೀರು, ಡ್ರ್ಯಾಗನ್ ಹಣ್ಣು, ಮಾವು, ಬಾಳೆಹಣ್ಣು, ಹಲಸು ಮತ್ತು ಪಪ್ಪಾಯಿ ಬಳಕೆ ಮಾಡುತ್ತಿದ್ದಾರೆ. 250 ಲೀಟರ್​ ವೈನ್​​ ತಯಾರಿಸಲು 1000 ಎಳನೀರು ಮತ್ತು 250 ಕೆ.ಜಿ. ಹಣ್ಣು ಬಳಸುತ್ತಿದ್ದಾರೆ

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00