ಕಾಲ್ನಡಿಗೆಯಲ್ಲಿ ಅಯೋಧ್ಯೆಯಿಂದ ಶಬರಿಮಲೆಗೆ ಹೊರಟಿದ್ದ ಕಾಸರಗೋಡು ನಿವಾಸಿಯ ದುರ್ಮರಣ

25ನೇ ವರ್ಷದ ಶಬರಿಮಲೆ ದರ್ಶನ ಭಕ್ತನ ಅಂತ್ಯಯಾತ್ರೆಯಾಗಬೇಕೇ?!

by Narayan Chambaltimar

ಕಣಿಪುರ ಸುದ್ದಿಜಾಲ (ಅ. 29)

ಕಾಸರಗೋಡಿನಿಂದ ಹೊರಟು ದೇಶ ವ್ಯಾಪಕ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನೆಲ್ಲಾ ಕಾಲ್ನಡಿಗೆಯಲ್ಲೇ ಪರ್ಯಟನೆಗೈದು ದೇಶದಜನಗಮನ ಸೆಳೆದ ಕಾಸರಗೋಡು ಕೂಡ್ಳುವಿನ ಸ್ನೇಹಿತರಿಬ್ಬರ ಪೈಕಿ ಓರ್ವ ಕಾಲ್ನಡಿಗೆಯ ಪಯಣ ಮಧ್ಯೆ ಮೃತಪಟ್ಟ ವರದಿ ವರದಿಯಾಗಿದೆ.
ಅಯೋಧ್ಯೆಯಿಂದ ಶ್ರೀ ಶಬರಿಮಲೆ ಗುರಿಯಾಗಿಸಿ ನಡೆಯುವ ಮಧ್ಯೆ ಭೋಪಾಲದಲ್ಲಿ ಹೃದಯಾಘಾತ ಸಂಭವಿಸಿ ಕೂಡ್ಲು ನಿವಾಸಿ ಶಿವಪ್ರಕಾಶ್ (45)ಮೃತಪಟ್ಟರು.

ಅಯೋಧ್ಯೆಯಿಂದ ಹೊರಟು ಮಧ್ಯಪ್ರದೇಶದ ಸಿಯೋನಿ ತಲುಪಿದಾಗ ಎದೆ ನೋವು ಕಾಣಿಸಿಕೊಂಡವರನ್ನು ಕೂಡಲೇ ಸಿಯೋನಿ ನಗರದ ಆಸ್ಪತ್ರೆಗೆ ಸ್ಥಳೀಯ ಹಿಂದೂ ದೇವಾಲಯಗಳ ಕಾರ್ಯಕರ್ತರ ಸಹಕಾರದಿಂದ ಸೇರಿಸಲಾಯಿತಾದರೂ ಅಷ್ಟರಲ್ಲಾಗಲೇ ಮರಣಸಂಭವಿಸಿತ್ತು.

ಕಳೆದ 24ವರ್ಷಗಳಿಂದ ನಿರಂತರ ಶಬರಿಮಲೆ ಸನ್ನಿಧಾನಕ್ಕೆ ವರ್ಷಂಪ್ರತಿ ವ್ರತ ನಿಷ್ಠೆಯಿಂದ ದರ್ಶನ ನೀಡುತ್ತಿದ್ದ ಇವರು ಇದೇ ಮೊದಲ ಬಾರಿಗೆ ದೇಶದ ಪುಣ್ಯ ಕ್ಷೇತ್ರ ದರ್ಶನಗೈದು ಶಬರಿಮಲೆಗೆ ಬರುವಂತೆ ದೇಶ ಪರಯಟನೆಗೆ ಹೊರಟಿದ್ದರು. ಕಾಸರಗೋಡಿನ ಗೆಳೆಯರಿಬ್ಬರು ಕಾಲ್ನಡಿಗೆಯಲ್ಲಿ ಕಾಶ್ಮೀರ ಸಹಿತ ದೇಶದ ಪುಣ್ಯ ಕ್ಷೇತ್ರ ಸಂದರ್ಶಿಸಿ ಶಬರಿಮಲೆ ಮೂಲಕ ತಾಯ್ನೆಲಕ್ಕೆ ಮರಳುವುದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವಿಶೇಷ ಸುದ್ದಿಯಾಗಿತ್ತು.

ಕೂಡ್ಳಿನ ದಿ. ಅಪ್ಪು -ಶ್ರೀ ದೇವಿ ದಂಪತಿ ಎಂಬವರ ಮಗನಾದ ಶಿವಪ್ರಕಾಶ್ ಕ್ಯಾಟರಿಂಗ್ ವೃತ್ತಿಯವರಾಗಿದ್ದರು. ಮೃತರು ಪತ್ನಿ ಸರಸ್ವತಿ, ಮತ್ತು ಬಂಧು ಬಳಗವನ್ನು ಆಗಿದ್ದಾರೆ.

ಮೃತರಿಗೆ ಆರವ್ ಪ್ರಸಾದ್ ಹಾಗೂ ಅಶ್ವೀ ಪ್ರಸಾದ ಎಂಬಿವರು ಎಳೆಯ ಮಕ್ಕಳಾಗಿದ್ದಾರೆ. ವ್ರತ ನಿಷ್ಠೆಯ ಪುಣ್ಯ ಕ್ಷೇತ್ರ ದರ್ಶನದ ನಡುವಣ ಈ ವಿಯೋಗ ಕೂಡ್ಳು ಪರಿಸರದಲ್ಲಿ ದುಖಃದ ವಾತಾವರಣ ಮೂಡಿಸಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00