ಮೈಸೂರು: ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯ ಪ್ರವೇಶ ಶುಲ್ಕವನ್ನು ಈ ದೀಪಾವಳಿ ವೇಳೆಯೇ ಪರಿಷ್ಕರಿಸಲಾಗಿದೆ. ಟಿಕೆಟ್ ದರದ ಮೇಲೆ ಜಿಎಸ್‌ಟಿ ಸೇರಿಸಿ ಪ್ರವೇಶ ದರವನ್ನು ಹೆಚ್ಚಿಸಲಾಗಿದೆ.
ವಯಸ್ಕರಿಗೆ ರೂ. 100 ರಿಂದ 120 ಹಾಗೂ 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ ರೂ 50ರಿಂದ 70 (10 ವರ್ಷದೊಳಗಿನ ಮಕ್ಕಳಿಗೆ ಉಚಿತ) ಹೆಚ್ಚಿಸಲಾಗಿದೆ. ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರ 50 ರೂ. ಹಾಗೂ ವಿದೇಶಿ ಪ್ರವಾಸಿಗರಿಗೆ 1000 ರೂ. ಶುಲ್ಕ ವಿಧಿಸಲಾಗಿದೆ. ಈ ಹಿಂದೆ ವಿದೇಶಿ ಪ್ರವಾಸಿಗರಿಗೆ ರೂ.100 ಇತ್ತು.
ಮೈಸೂರು ಅರಮನೆಗೆ ದಿನನಿತ್ಯ ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅರಮನೆ ವೀಕ್ಷಣೆಗಾಗಿ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಈಚೆಗೆ ನಡೆದ ಅರಮನೆ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಒಳಾವರಣದಲ್ಲಿ ಬರುವ ಚಪ್ಪಲಿ ಸ್ಟಾಂಡ್, ಲಗ್ಗೇಜ್ ಕೊಠಡಿ ಮತ್ತು ಶೌಚಾಲಯಗಳು ಪ್ರವಾಸಿಗರಿಗೆ ಉಚಿತವಾಗಿರಲಿದೆ. ಹಿಂದೆ ಇದಕ್ಕೆ ಶುಲ್ಕ ಪಾವತಿಸಬೇಕಾಗಿತ್ತು ಎಂದು ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.