ದೈವಸ್ಥಾನದ ಸಿಡಿಮದ್ದು ಸ್ಫೋಟ ದುರಂತ : ಅನುಮತಿ ರಹಿತ ದಾಸ್ತಾನು ಮತ್ತು ಸುರಕ್ಷಾ ವೈಫಲ್ಯ :ಎಸ್ಪಿ

ದೈವಸ್ಥಾನ ಪದಾಧಿಕಾರಿಗಳಿಬ್ಬರು ವಶಕ್ಕೆ

by Narayan Chambaltimar

ಕಾಸರಗೋಡು: ನೀಲೇಶ್ವರದ ವೀರರ್ಕಾವ್ ಅಞ್ಞೂಂಟಬಲಂ ದೈವಸ್ಥಾನದ ಕಳಿಯಾಟ ಸಂದರ್ಭದಲ್ಲಿ ಉಂಟಾದ ಸಿಡಿಮದ್ದು ಸ್ಪೋಟದ ದುರಂತಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪ ಹಾಗೂ ಜಿಲ್ಲಾಧಿಕಾರಿ ಇಂಬುಸೇಖರನ್ ಭೇಟಿ ನೀಡಿದರು.

ಘಟನಾ ಸ್ಥಳ ಪರಿಶೀಲಿಸಿದ ಬಳಿಕ ಮಾತನಾಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡ. ಶಿಲ್ಪ ಅವರು “ಪರಿಮಿತವಾದ ಜಾಗದಲ್ಲಿ ಸಿಡಿಮದ್ದು ಸಂಗ್ರಹಿಸಿಡುವಾಗ ವಹಿಸಬೇಕಾದ ಯಾವದೇ ಸುರಕ್ಷಾ ಮುನ್ನೆಚ್ಚರಿಕೆಗಳನ್ನಿಲ್ಲಿ ಪಾಲಿಸಿಲ್ಲ ಮತ್ತು ಗಂಭೀರವಾದ ಸುರಕ್ಷಾ ವೈಫಲ್ಯ ಉಂಟಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ದೈವಸ್ಥಾನದ ಉತ್ಸವ ಸಮಿತಿ ಪದಾಧಿಕಾರಿಗಳ ಪೈಕಿ ಅಧ್ಯಕ್ಷ, ಕಾರ್ಯದರ್ಶಿ ಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ತಾವು 25ಸಾವಿರ ರೂಗಳ ಸಿಡಿಮದ್ದನ್ನಷ್ಟೆ ತಂದಿರುವುದಾಗಿ ಅವರು ಹೇಳಿದ್ದು ಈ ಸಂಬಂಧ ರಶೀದಿಯನ್ನು ಹಾಜರು ಪಡಿಸಿದ್ದಾರೆ.

ಇದೇ ವೇಳೆ ಸಿಡಿಮದ್ದು ಪ್ರದರ್ಶನಕ್ಕೆ ಪೂರ್ವಾನುಮತಿ ಪಡೆದಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಸಿಡಿಮದ್ದು ಶೇಖರಿಸಿಟ್ಟ ಸ್ಥಳಕ್ಕೆ ಉತ್ಸವ ಸಂಬಂಧವಾಗಿ ಪಟಾಕಿ ಸ್ಪೋಟಿಸುವಾಗ ಅಗ್ನಿ ಸ್ಪರ್ಶವಾಗಿ ದಾಸ್ತಾನು ಸ್ಪೋಟಿಸಿತು. ಇದರ ಪಕ್ಕದಲ್ಲೇ ಮಹಿಳೆಯರಾದಿ ನೂರಾರು ಮಂದಿ ನಿಂತಿದ್ದರು. ಪರಿಣಾಮ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, 25 ಮಂದಿಗಳ ಸ್ಥಿತಿ ಗಂಭೀರವಾಗಿದೆ. ಬೆಂಕಿ ಸುಟ್ಟ ಗಾಯಗಳೊಂದಿಗೆ ಇವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯರಾತ್ರಿ 12.30ರ ಆಸುಪಾಸಿನಲ್ಲಿ ಕಳಿಯಾಟದಂಗವಾದ ತೈಯ್ಯಂ ನೋಡಲೆಂದು 5ಸಾವಿರ ಮಂದಿ ಇಲ್ಲಿ ನೆರೆದಿದ್ದರು. ಆದರೆ ಪೋಲೀಸರ ಕಡೆಯಿಂದ ಯಾವ ಸುರಕ್ಷಾ ಮುನ್ನೆಚ್ಚರಿಕೆಗಳೂ ಇರಲಿಲ್ಲ ಎಂದು ಸ್ಥಳ ಸಂದರ್ಶಿಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಆರೋಪಿಸಿದರು. ಘಟನಾ ಸ್ಥಳದಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು ಇದು ಸರಕಾರೀ ವೈಫಲ್ಯವನ್ನು ಸಾರುತ್ತದೆಂದು ಟೀಕಿಸಿದರು. ಇದು ಸ್ಥಳದಲ್ಲೇ ಇದ್ದ ಡಿವೈಎಫ್ಐ ಕಾರ್ಯಕರ್ತರಲ್ಲಿ ಅಸಮಧಾನ ಮೂಡಿಸಿ, ವಾಗ್ವಾದಕ್ಕೆ ಕಾರಣವಾಯಿತು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00