ಮಂಗಳೂರು : ಪ್ರೀತ್ಸೇ… ಪ್ರೀತ್ಸೇ ಎಂದು ಕಾಟ ಮತ್ತು ಕಿರುಕುಳ ಕೊಟ್ಟ ಹಿನ್ನೆಲೆಯಲ್ಲಿ ಯುವತಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಪ್ರೀತಿಸದಿದ್ದರೆ 24 ತುಂಡು ಮಾಡುವುದಾಗಿ ಬೆದರಿಸಿದ್ದ ಆರೋಪಿ ಇಡ್ಯಾ ನಿವಾಸಿ ಶಾರಿಕ್ ಎಂಬಾತನನ್ನು ಸುರತ್ಕಲ್ ಪೋಲೀಸರು ಬಂಧಿಸಿದರು
ಯುವತಿ ತನ್ನ ಫೆ. ಬು ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದು, ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳು ತನ್ನ ಅಣ್ಣನಿಗೆ ಬರುತ್ತಿದೆ ಎಂದು ದೂರಿನಲ್ಲಿ ತಿ ಳಿಸಿದ್ದಳು.
ಈತನ್ಮಧ್ಯೆ ತನಗೆ ಕಿರುಕುಳ, ಬೆದರಿಕೆ ಉಂಟಾದುದು ಪ್ರಚಾರವಾದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಇದೊಂದು ಲವ್ ಜಿಹಾದ್ ಕೃತ್ಯ ಎಂದು ಆರೋಪಿಸಿ ಶಾಸಕ ಭರತ್ ಶೆಟ್ಟಿ ಮತ್ತು ಹಿಂದೂ ಸಂಘಟನೆಗಳು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ರಂಗಕ್ಕಿಳಿದಿದ್ದರು. ಪ್ರಕರಣದಲ್ಲಿ ಬಂಧಿತನಾದ ಆರೋಪಿಯ ತಾಯಿ ನೂರ್ ಜಹಾನ್ ಎಂಬಾಕೆಯ ಪಾತ್ರ ಕೂಡಾ ಉಲ್ಲೇಖವಾಗಿದ್ದು, ಸಮಗ್ರ ತನಿಖೆಯಾಗಬೇಕೆಂದು ಒತ್ತಾಯವೆದ್ದಿದೆ.