ಕೇರಳದ ಮುಸ್ಲೀಮರ ನಡುವೆ ಉಗ್ರಗಾಮಿತ್ವದ ಬೀಜ ಬಿತ್ತಿದ್ದೇ ಅಬ್ದುಲ್ ನಾಸರ್ ಮದನಿ..! ಹೀಗೆನ್ನಲು ಸಿಪಿಎಂ ನಾಯಕ ಜಯರಾಜನ್ ಇಷ್ಟೂ ವರ್ಷ ತಡ ಮಾಡಿದ್ದೇಕೆ..??

by Narayan Chambaltimar

 

-ಎಂ. ನಾ. ಚಂಬಲ್ತಿಮಾರ್

ಕೇರಳದ ಮುಸ್ಲಿಂ ಮತೀಯರ ಎಳೆಪೀಳಿಗೆಯ ಯುವರಕ್ತದ ನರ ನಾಡಿಯಲ್ಲಿ ಉಗ್ರವಾದಿ ಇಸ್ಲಾಮಿಕ್ ಚಿಂತನೆಯ ಬೀಜ ಬಿತ್ತಿ ಬೆಳೆಸಿದ ಮೊದಲಿಗ ಪಿಡಿಪಿ ಸ್ಥಾಪಕ ಅಬ್ದುಲ್ ನಾಸರ್ ಮದನಿ ಎಂದುಲ್ಲೇಖಿಸಿದ ಸಿಪಿಎಂ ಹಿರಿಯ ನಾಯಕ ಪಿ. ಜಯರಾಜನ್ ಅವರ ಕೃತಿಯೊಂದು ಬಿಡುಗಡೆಗೆ ಮುನ್ನವೇ ಚರ್ಚೆಗೆ, ತಾತ್ವಿಕ ಸಂವಾದಕ್ಕೆ ಮುನ್ನುಡಿ ಬರೆದಿದೆ!
ಕೇರಳ ಎಂದಲ್ಲ ಎಲ್ಲೆಡೆ ಇದೊಂದು ವಿವಾದಿತ ಸಂವಾದಕ್ಕೆ ಕಾರಣವೂ ಆಗಿದೆ. ಇಸ್ಲಾಮಿಕ್ ಮತೀಯ ಮೂಲಭೂತವಾದಿತ್ವನ್ನು ಪ್ರಶ್ನಿಸುವ ಚರ್ಚೆಗೆ ಮತ್ತೊಮ್ಮೆ ಕಾರಣವಾಗಿದೆ.

ಸಿಪಿಎಂ ಮುಖಂಡ ಪಿ. ಜಯರಾಜನ್ ಮತ್ತು ಪಿಡಿಪಿ ಸ್ಥಾಪಕ ಅಬ್ದುಲ್ ನಾಸರ್ ಮ(ಅ)ದನಿ

ಪಿ. ಜಯರಾಜನ್ ಕೇರಳದ ಹಿರಿಯ ಅನುಭವಿ ಕಮ್ಯೂನಿಸ್ಟ್ ನಾಯಕ. ಕಣ್ಣೂರಿನ ಪಾರ್ಟಿ ಕೋಟೆಯನ್ನು ಸೃಜಿಸಿದ ಮುತ್ಸದ್ದಿ. ಜಯರಾಜನ್ ಈಗ ಹೀಗಂದಿರುವುದೇ ಚರ್ಚೆಗೆ ಕಾರಣ. ಈ ವರೆಗೆ ಯಾವೊಬ್ಬ ಕಮ್ಯೂನಿಷ್ಟ್ ನಾಯಕರೂ ತೀವ್ರ, ಭಯೇತ್ಪಾದನಾ ಇಸ್ಲಾಮಿಕ್ ಚಿಂತನೆಯ ಬೀಜ ಬಿತ್ತಿದ ಅಬ್ದುಲ್ ನಾಸರ್ ಮದನಿಯನ್ನು ಅಪ್ಪಿ, ತಪ್ಪಿ ದೂಷಿಸಿರಲಿಲ್ಲ. ಬದಲು ಓಲೈಕೆಯ ಮೃದು ನೀತಿಯಿಂದ ಮದನಿಯನ್ನು ಬೆಂಬಲಿಸಿದ್ದರು. ಮುಸಲ್ಮಾನ ಮತಗಳನ್ನು ವಿಭಜಿಸುವ ರಾಜಕೀಯ ಹಿತಕ್ಕಾಗಿಯೇ ಬೆಂಬಲಿಸಿದ್ದರು. ಈ ಕಾರಣದಿಂದಲೇ ಮದನಿಯನ್ನು ಬೆಂಬಲಿಸಿದ ಪಕ್ಷದ ನಾಯಕನೊಬ್ಬ ಈ ವರೆಗೂ ಬಾಯ್ಬಿಡದ ಕೆಲವು ಅಪ್ಪಟ ಸತ್ಯವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ ಎಂಬುದೇ ಈಗಿನ ಸಂವಾದಿತ ವಿಷಯ. ಬಿಜೆಪಿ ಸಹಿತ ಸಂಘ ಪರಿವಾರ ದಶಕಗಳ ಹಿಂದೆ ಹೇಳಿದ್ದನ್ನು ಕಮ್ಯುನಿಸ್ಟ್ ನಾಯಕ ಜಯರಾಜನ್ ಈಗ ಹೇಳಲೇಕೆ ಮುಂದಾದರು??

ಅಯೋಧ್ಯೆ ಆಂದೋಲನ ಶುರುವಾದ 90ರ ದಶಕದ ಅದೇ ಕಾಲದಲ್ಲಿ ಕೇರಳದಲ್ಲಿ ಅಬ್ದುಲ್ ನಾಸರ್ ಮದನಿ ಮತೀಯ ಮುಸಲ್ಮಾನ ಹಿತ ಚಿಂತನೆಯ ಉಗ್ರಗಾಮಿ ರಾಜಕೀಯದೊಂದಿಗೆ ರಂಗಕ್ಕಿಳಿದಿದ್ದರು. ತನ್ನದು ದಮನಿತ ರಾಜಕೀಯದ ವಿರುದ್ಧ ಹೋರಾಟ ಎನ್ನುತ್ತಲ್ಲೇ ರಾಷ್ಟ್ರೀಯತೆಯಾದ ಹಿಂದುತ್ವದ ವಿರುದ್ಧ ಬಹಿರಂಗ ಸಮರ ಸಾರಿದ್ದರು. ತನ್ನ ವಾಕ್ಪಟುತ್ವದ ಪ್ರತಿಭೆಯಿಂದ ಯುವಕರ ನರನಾಡಿಗಳಲ್ಲಿ ಮತೀಯ ಭಾವನೆ ಕೆರಳಿಸಿದ್ದರು. ಅಗ ಜಾಲತಾಣಗಳೇ ಇರಲಿಲ್ಲ. ಇದರಿಂದ ಮದನಿ ಭಾಷಣಗಳು ಕ್ಯಾಸೆಟ್ ರೂಪದಲ್ಲಿ ವ್ಯಾಪಕ ಪರಿಚಯವಾಯಿತು. ಅಲ್ಲದೇ ಬಹಿರಂಗ ಸಮಾವೇಶದಲ್ಲಷ್ಟೇ ಅದನ್ನು ಕೇಳಬಹುದಿತ್ತು. ಇಂಥ ಭಾಷಣಗಳನ್ನು ಕೇಳಿಯೇ ಪ್ರಚೋದಿತರಾದ ಕೇರಳದ ಮುಸ್ಲೀಂ ಯುವಕರು , ಹೊಸ ತಲೆಮಾರು ಒಗ್ಗೂಡಿ ಮದನಿ ನಾಯಕತ್ವದಲ್ಲಿ ಆರ್. ಎಸ್. ಎಸ್. ಗೆ ಬದಲಾಗಿ ಐಸಿಸ್ ಗೆ ರೂಪುನೀಡಿದರು. ಇದುವೇ ಕೇರಳದ ಮೊದಲ ಉಗ್ರಗಾಮಿ ಸಂಘಟನೆ ಎಂದು ಜಯರಾಜನ್ ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.ಇದು ವಾಸ್ತವ ಕೂಡಾ!

ಹೀಗ ಕೇರಳದ ರಾಜಕೀಯದಲ್ಲಿ ಮುಸ್ಲಿಂ ಲೀಗಿನ ಹೊರತಾಗಿ ಇಸ್ಲಾಮಿಕ್ ಉಗ್ರಗಾಮಿ ಶಕ್ತಿಯೊಂದು ಉದಿಸಿದ ಕತೆಯನ್ನು ಎಡಪಂಥೀಯ ನಾಯಕ ಜಯರಾಜನ್ ತನ್ನ ದೃಷ್ಠಿ – ಧೋರಣೆಯನುಸಾರ ಬರೆದ ಕೃತಿ ಸಾಕ್ಷಾತ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದಲೇ ಈಗ ಬಿಡುಗಡೆಯಾಗುತ್ತಿದೆ.
ಇದುವೇ ರಾಜಕೀಯ ವಿಪರ್ಯಾಸಕ್ಕೆ ವಸ್ತು. “ಕೇರಳಂ ಮುಸ್ಲೀಂ ರಾಷ್ಟ್ರೀಯಂ-ರಾಷ್ಟ್ರೀಯ ಇಸ್ಲಾಂ
ಎಂಬ ಹೆಸರುಳ್ಳ ಪುಸ್ತಕವನ್ನು ಮಾತೃಭೂಮಿ ಪಬ್ಲಿಕೇಶನ್ ಪ್ರಕಟಿಸಿದೆ. ಕಲ್ಲಿಕೋಟೆಯಲ್ಲಿ ಅ. 26ರಂದು ಮುಖ್ಯಮಂತ್ರಿ ಪಿಣರಾಯಿ ಕೃತಿ ಪ್ರಕಟಿಸಲಿದ್ದಾರೆ. ಕಳೆದ 3 ದಶಕದಲ್ಲಿ ಪಿಡಿಪಿ ಸಹಿತ ಮುಸಲ್ಮಾನ ಉಗ್ರವಾದಿತ್ವನ್ನು ಖಂಡಿಸದೇ, ಪೋಷಿಸುತ್ತಲೇ ನಡೆದು ಇಸ್ಲ್ಮಾಮಿಕ್ ಮತ ವಿಭಜನೆಯನ್ನೇ ಗುರಿಯಾಗಿಟ್ಟು ಮುನ್ನಡೆದ ಸಿಪಿಎಂ ಈಗ ಏಕಾಏಕಿ ಹೆಜ್ಜೆ ಬದಲಾಯಿಸಿದ್ದೇಕೆ??
ಇದು ಕರಾವಳಿ ತೀರದ ಸರ್ವರ ಕೌತುಕ

ಹೆಚ್ಚೇಕೆ ಚುನಾವಣಾ ಪ್ರಚಾರ ಪೋಸ್ಟರ್, ಕಟೌಟ್ ಗಳಲ್ಲಿ ಮದನಿ ಪಟವನ್ನೂ ಹಾಕಿದ್ದರು. ಈಗ ಕೇರಳ ಸಿಎಂ ಆಗಿರುವ ಸಿಪಿಎಂ ವರಿಷ್ಠ ಪಿಣರಾಯಿ ವಿಜಯನ್ ಅಬ್ದುಲ್ ನಾಸರ್ ಮದನಿಯನ್ನು ತೊಡೆ ಸೋಂಕಿನಲ್ಲಿ ಕುಳ್ಳಿರಿಸಿ, ಮದನಿ ನಡೆಸುವುದು ಪ್ರಜಾಫ್ರಭುತ್ವದ ದಲಿತ ದಮನಕಾರಿ ವಿರುದ್ಧ ಹೋರಾಟ ಎಂದಿದ್ದರು. ಅಬ್ದುಲ್ ನಾಸರ್ ಮದನಿ ಪಕ್ಷದ ಬೆಂಬಲ ಪಡೆದಿದ್ದರು.
ಇದೇ ಪಿಣರಾಯಿ ವಿಜಯನ್ ಇಂದು ಅದೇ ಮದನಿಯ ಮುಖಬಣ್ಣವನ್ನು ಬಣ್ಣಿಸುವ ಪುಸ್ತಕ ಪ್ರಕಟಿಸುತ್ತಿದ್ದಾರೆ!!
ಇದಲ್ಲವೇ ರಾಜಕೀಯ ವಿಪರ್ಯಾಸ??
ಈಗ ಹೇಳುವಸತ್ಯವನ್ನೇಕೆ ಅವರು ನಿನ್ನೆಯ ತನಕ ಬಚ್ಚಿಟ್ಟರು? ಯಾರ ಸಂತೃಪ್ತಿಯ ಲಾಭಕ್ಕಾಗಿ??

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00