45
ಉಪ್ಪಳ : ಉಪ್ಪಳದ ಮನೆಯೊಂದರಿಂದ ಮತ್ತೊಮ್ಮೆ ಬೃಹತ್ ಪ್ರಮಾಣದ ಗಾಂಜಾ ವಶಪಡಿಸಲಾಗಿದೆ. ರಹಸ್ಯ ಸುಳಿವಿನ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿ ಉಪ್ಪಳದ ಬಪ್ಪಾಯಿತೊಟ್ಟಿ ಎಂಬಲ್ಲಿನ ಮನೆಯೊಂದಕ್ಕೆ ಧಾಳಿ ನಡೆಸಿದ ಮಂಜೇಶ್ವರ ಎಸ್. ಐ ನಿಖಿಲ್ ನೇತೃತ್ವದ ಪೋಲೀಸ್ ತಂಡ ಮುಹಮ್ಮದ್ ಅರ್ಷಾದ್ (49) ಎಂಬಾತನನ್ನು ಬಂಧಿಸಿ, ಈತನಿಂದ 1ಕಿಲೋ ತೂಕದ ಗಾಂಜಾ ವಶಪಡಿಸಲಾಗಿದೆ.
ಈತ ಮಲಗುವ ಮಂಚದಡಿಯಲ್ಲಿ ಬ್ಯಾಗ್ ನಲ್ಲಿ ಗಾಂಜಾ ಇರಿಸಲಾಗಿತ್ತು. ಗಾಂಜಾ ಮಾರಾಟಕ್ಕಾಗಿ ಬಳಸುತ್ತಿದ್ದ ತೂಕದ ತಕ್ಕಡಿ, ಪ್ಯಾಕೆಟ್ ಮಾಡುವ ಲಕೋಟೆಯನ್ನು ಕೂಡಾ ಪೋಲೀಸರು ವಶಪಡಿಸಿದ್ದಾರೆ.
ಉಪ್ಪಳ ಕೇಂದ್ರೀಕರಿಸಿ ಬೃಹತ್ ಮಾದಕವಸ್ತು ಜಾಲ ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠರ ವಿಶೇಷ ನಿರ್ದೇಶನದಂತೆ ಮಾಹಿತಿ ಕಲೆ ಹಾಕಿ ಮನೆಗೆ ಧಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಯಿತು.