ತ್ರಿಶ್ಶೂರು: ಕೇರಳದ ತ್ರಿಶ್ಶೂರಿನ ಚಿನ್ನಾಭರಣ ಮಳಿಗೆಗಳಿಗೆ ಜಿ. ಎಸ್. ಟಿ ಇಂಟೆಲಿಜೆನ್ಸ್ ಅಧಿಕಾರಿಗಳು ನಡೆಸಿದ ಸಂಯುಕ್ತ ಧಾಳಿಯಲ್ಲಿ ಅನಧಿಕೃತವಾಗಿ ಬಚ್ಚಿಟ್ಟ 120ಕಿಲೋ ಚಿನ್ನ ವಶಪಡಿಸಲಾಗಿದೆ. ಕೆಲವರನ್ನು ತನಿಖಾ ವಿಧೇಯ ವಶಪಡಿಸಲಾಗಿದೆ.
ಜಿ. ಎಸ್. ಟಿ ಇಂಟೆಲಿಜೆನ್ಸ್ ಡೆಪ್ಯೂಟಿ ಕಮೀಷನರ್ ದಿನೇಶ್ ಕುಮಾರ್ ನಿರ್ದೇಶನದಂತೆ ಬೃಹತ್ ಧಾಳಿ ನಡೆಯಿತು. ಕಳೆದ ಐದು ವರ್ಷಗಳ ಜಿ. ಎಸ್. ಟಿ ತೆರಿಗೆ ವಂಚನೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತ್ರಿಶ್ಶೂರಿನ ಜ್ಯುವೆಲ್ಲರಿ, ಚಿನ್ನಾಭರಣ ನಿರ್ಮಾಣ ಕೇಂದ್ರ ಸೇರಿದಂತೆ 74 ಕಡೆಗಳಿಗೆ ಧಾಳಿ ಮಾಡಲಾಗಿದೆ.
ನಿನ್ನೆ ಆರಂಭಗೊಂಡ ಧಾಳಿ ಕಾರ್ಯಾಚರಣೆಗಳು ಇಂದೂ ಮುಂದುವರಿಯುತ್ತಿದ್ದು, ಯಾವುದೇ ಅಧಿಕೃತ ದಾಖಲೆಗಳಿಲ್ಲದ 20ಕಿಲೋ ಚಿನ್ನ ವಶಪಡಿಸಲಾಯಿತು. ಕೇರಳದಲ್ಲಿ ನಡೆದ ಅತೀ ದೊಡ್ಡ ಜಿ. ಎಸ್. ಟಿ. ಧಾಳಿ ಇದಾಗಿದೆ. ಧಾಳಿಯಲ್ಲಿ 700ಮಂದಿ ಜಿ. ಎಸ್. ಟಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ತ್ರಿಶ್ಶೂರಿನಲ್ಲಿ ಚಿನ್ನಾಭರಣ ಮಳಿಗೆಗಳು ಅತ್ಯಧಿಕ ಸಂಖ್ಯೆಯಲ್ಲಿದ್ದು, ಇಲ್ಲಿ ಹೇರಳ ಪ್ರಮಾಣದಲ್ಲಿ ನಕಲಿ ಬಿಲ್ ಹಾಕುವ ವ್ಯಾಪಾರ ನಡೆಯುತ್ತಿತ್ತೆನ್ನಲಾಗಿದೆ.