ಕಣಿಪುರ ಸುದ್ದಿಜಾಲ (ಅ. 23)
ನೀರ್ಚಾಲಿನಲ್ಲಿ 49ವರ್ಷಗಳ ಹಿಂದೆ ಸ್ಥಾಪನೆಗೊಂಡು ಪ್ರಸಕ್ತ ಸುವರ್ಣ ವರ್ಷಾಚರಣೆಯಲ್ಲಿರುವ ಶ್ರೀಕುಮಾರ ಸ್ವಾಮಿ ಭಜನಾ ಮಂದಿರವನ್ನು ನೂತನವಾಗಿ ನಿರ್ಮಿಸುವುದಕ್ಕೆ ಇಂದು ಶಿಲಾನ್ಯಾಸ ನಡೆಯಿತು.
ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರು ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು “ಭಜನಾ ಮಂದಿರಗಳು ಹಿಂದೂ ಸಮಾಜದೊಳಗೆ ಜಾತಿ ಬೇಧವಿಲ್ಲದೆ, ಮೇಲು ಕೀಳುಗಳಿಲ್ಲದೇ ಭಕ್ತರನ್ನು ಜೋಡಿಸಿ ಒಗ್ಗೂಡಿಸುವ ಕೇಂದ್ರ. ಅದು ಬೆಳಗಬೇಕಾದರೆ ಹಿಂದೂ ಸಮಾಜ ಅಲ್ಲಿ ಒಗ್ಗೂಡಿ ಬೆರೆಯಬೇಕು. ಆಗ ಸಶಕ್ತ ಸಮಾಜ ಸಂಘಟನೆಯಾಗುತ್ತದೆ” ಎಂದರು.
ಮಂದಿರ ಜೀರ್ಣೋದ್ದಾರ ಸಮಿತಿ ಗೋ. ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದರು. ಬ್ರಹ್ಮಶ್ರೀ ತಂತ್ರಿ ಉಳಿಯ ವಿಷ್ಣು ಆಸ್ರ ಗೌರವ ಉಪಸ್ಥಿತರಿದ್ದರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಕಾರ್ಯಕ್ರಮ ಉದ್ಘಾಟಿಸಿದರು.
ಜ್ಯೋತಿಷ್ಯರತ್ನ ಪದ್ಮನಾಭ ಶರ್ಮ ಇರಿಞಾಲಕ್ಕುಡ, ಉದ್ಯಮಿ ಮಧುಸೂಧನ್ ಆಯರ್ ಮಂಗಳೂರು, ವೇ. ಮೂ. ಶಿವಶಂಕರ ಭಟ್ ಕಿಳಿಂಗಾರು, ಶಿಲ್ಪಿ ರಮೇಶ ಕಾರಂತ ಬೆದ್ರಡ್ಕ, ಧ. ಗ್ರಾ. ಯೋಜನೆಯ ಯೋಜನಾಧಿಕಾರಿ ಮುಖೇಶ್, ಮಂದಿರ ನವೀಕರಣ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಖಂಡಿಗೆ, ನಾರಾಯಣ ಶೆಟ್ಟಿ ಬೇಳ , ನೀರ್ಚಾಲು ವರ್ತಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಗುರುಸ್ವಾಮಿಗಳಾದ ರಮೇಶ್ ಆಚಾರ್ಯ, ಕುಞ್ಞಿಕಣ್ಣ, ಸಂಜೀವ ರೈ , ಪರಮೇಶ್ವರ ಆಚಾರ್ಯ ನೀರ್ಚಾಲು, ಮಾನಮಾಸ್ತರ್ ಮಾನ್ಯ, ನಾರಾಯಣ ನಾಯ್ಕ ಮೈಕುರಿ, ಸಜಿತ್ ಕುಮಾರ್, ಚೋಮನಾಯ್ಕ, ಪದ್ಮಾವತಿ ಗಂಗಾಧರ ಪೂವಾಳೆ, ಜಯರಾಮ ಪೊನ್ನೆಂಗಳ
ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ನೀರ್ಚಾಲು ಪ್ರಾರ್ಥನೆ ಹಾಡಿದರು. ಮಂದಿರ ಜೀರ್ಣೋದ್ದಾರ ಸಮಿತಿ ಪ್ರ. ಕಾರ್ಯದರ್ಶಿ ರವೀಂದ್ರ ಮಾಸ್ತರ್ ಸ್ವಾಗತಿಸಿದರು. ಮಂಜುನಾಥ ಡಿ. ಮಾನ್ಯನಿರೂಪಿಸಿದರು. ಬಾಲಕೃಷ್ಣ ನಾಯ್ಕ ವಂದಿಸಿದರು.