ಕಣಿಪುರ ಸುದ್ದಿಜಾಲ (ಅ. 21)
ಬೆಂಗಳೂರು : ಕನ್ನಡದ ಸಹ ಭಾಷೆಗಳ ಸಂರಕ್ಷಣೆಗಾಗಿ ಇದೇ ಮೊದಲಬಾರಿಗೆ ಕರ್ನಾಟಕ ಸರಕಾರ “ಸಶಕ್ತ ಭಾಷಾ ನೀತಿ” ರೂಪಿಸಲು ತಜ್ಞರ ಸಮಿತಿ ರಚಿಸಿದೆ
ಕರ್ನಾಟಕದಲ್ಲಿ ಕನ್ನಡದ ಉಪಭಾಷೆಗಳಾದ ತುಳು, ಕೊಡವ, ಕೊರಗ, ಬಡಗ, ಸಿದ್ಧಿ, ಕುರುಬ, ವರ್ಲಿ, ಚೆಂಚು, ಉರ್ದು, ಬ್ಯಾರಿ, ಮೊದಲಾದ ಭಾಷೆಗಳ ಸಂರಕ್ಷಣೆ ಈ ಯೋಜನೆಯ ಗುರಿಯಾಗಿದೆ. ಸರಕಾರದ ನಿರ್ಧಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸ್ವಾಗತಿಸಿ, ಸಣ್ಣ ಭಾಷೆಗಳನ್ನು ಸಂರಕ್ಷಿಸುವುದು ಕನ್ನಡವನ್ನು ಮತ್ತಷ್ಟು ಸಶಕ್ತೀಕರಿಸಲು ಪೂರಕವಾಗಿದೆ. ಪ್ರಾದೇಶಿಕ ಭಾಷೆಗಳೇ ನಮ್ಮ ಸಂಸ್ಕೃತಿಯ ಅನನ್ಯತೆ. ಅದನ್ನು ಪೋಷಿಸುವುದು ಸಂಸ್ಕೃತಿಯ ನಡೆ-ನುಡಿ ಕಾಯುವ ಕಾಯಕ ಎಂದಿದ್ದಾರೆ.
ಬಹುಭಾಷಾ ನಾಡಿಗೆ ನಿರೀಕ್ಷೆ?
ಕನ್ನಡದ ಉಪಭಾಷೆಗಳ ಪೈಕಿ ಎರಡೇ ಎರಡು ತಾಲೂಕಿನಲ್ಲಿ 10ಕ್ಕೂ ಅಧಿಕ ಉಪಭಾಷೆಗಳನ್ನಾಡುವ ಜನತೆ ನೆಲೆಸಿರುವ ಏಕೈಕ ಪ್ರದೇಶ ಕಾಸರಗೋಡು. ಭಾಷಾವಾರು ಪ್ರಾಂತ್ಯ ವಿಂಗಡಣೆಯಲ್ಲಿ ಅನ್ಯಾಯವಾಗಿ ಕೇರಳಕ್ಕೆ ಸೇರಿಸಲ್ಪಟ್ಟರೂ ಕಾಸರಗೋಡು, ಮಂಜೇಶ್ವರದ ಜನತೆ ಕರ್ನಾಟಕದಿಂದ ಹೊಕ್ಕುಳಬಳ್ಳಿಯ ಸಂಬಂಧ ಕಡಿಸಿಕೊಂಡಿಲ್ಲ. ಕನ್ನಡದ ಉಪಭಾಷೆಗಳನ್ನು ರಕ್ಷಿಸುವ ಕರ್ನಾಟಕ ಸರಕಾರದ ಯೋಜನೆ ಗಡಿನಾಡಿನ ಉಪಭಾಷಿಕರಲ್ಲಿ ನಿರೀಕ್ಷೆ ಮೂಡಿಸಿದೆ.
ಮರಾಟಿ, ಕರಾಡ, ತುಳು, ಬ್ಯಾರಿ, ಸಹಿತ ಅತ್ಯಧಿಕ ಉಪಭಾಷಿಕರುಳ್ಳ ಪ್ರದೇಶ ಕಾಸರಗೋಡು ತಾಲೂಕಾಗಿದೆ.
ಕೇರಳದ ಕನ್ನಡಿಗರೆಡೆಯ ಉಪಭಾಷೆಗಳಿಗೆ ಇದರಿಂದ ಪ್ರಯೋಜನ ದೊರೆಯುವುದೇ ಎಂಬುದು ನಿರೀಕ್ಷೆಯಾಗಿದೆ.