ಉದ್ಯೋಗ ಭರವಸೆ ನೀಡಿ ವಂಚಿಸಿದ ಸಚಿತಾ ರೈಗೆ ಸಿಪಿಎಂ ಸಂರಕ್ಷಣೆಯೆಂದು ಬಿಜೆಪಿ : ಕೂಡಲೇ ಬಂಧಿಸದಿದ್ದರೆ ಬಿಜೆಪಿ ಯಿಂದ ಜಿಲ್ಲಾ ಪೋಲೀಸ್ ವರಿಷ್ಠರ ಕಚೇರಿಗೆ ಮುತ್ತಿಗೆ

by Narayan Chambaltimar

ಕಾಸರಗೋಡು :ಉದ್ಯೋಗ ಭರವಸೆಯಿತ್ತು ಹಲವರಿಂದ ಲಕ್ಷಾಂತರ ರೂ ಕಬಳಿಸಿದ ಡಿವೈಎಫ್ಐ ನಾಯಕಿ ಸಚಿತಾ ರೈ ಯನ್ನು ಕಾಲವಿಳಂಬಿಸದೇ ಕೂಡಲೇ ಬಂಧಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಒತ್ತಾಯಿಸಿದ್ದಾರೆ.
ಕೇಂದ್ರ ಸರಕಾರೀ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವರಿಂದ ಲಕ್ಷಾಂತರ ರೂ ಪಡೆದು ವಂಚಿಸಿದ ಈಕೆಯ ವಿರುದ್ಧ ಹಲವು ಕೇಸುಗಳು ದಾಖಲಾದರೂ ಪೋಲೀಸರು ಬಂಧಿಸದೇ ಇರುವುದೇಕೆಂದರೆ ಈಕೆ ಸಿಪಿಎಂ ನ ಸಂರಕ್ಷಣೆಯಲ್ಲಿರುವ ಕಾರಣದಿಂದಲೇ ಆಗಿದೆ ಎಂದು ಕುಂಟಾರ್ ರವೀಶ ತಂತ್ರಿ ಆರೋಪಿಸಿದರು.

ಹಲವರಿಗೆ ವಂಚನೆ ಎಸಗಿದ ಈಕೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಬಂಧನಕ್ಕೆ ಯಾವುದೇ ಅಡೆತಡೆಗಳಿಲ್ಲ. ಹೀಗಿರುವಾಗ ಪೋಲೀಸರು ಆರೋಪಿಯನ್ನು ಬಂಧಿಸಿ ವಂಚನಾ ಜಾಲ ಬೆಳಕಿಗೆ ತಾರದೇ ಇರಲು ಕಾರಣವೇನೆಂದು ಪ್ರಶ್ನಿಸಿರುವ ಅವರು ಈ ವಿಚಾರದಲ್ಲಿ ಕಾಂಗ್ರೆಸ್ಸಿನ ಮೌನ ಕೂಡಾ ಪ್ರಶ್ನಾರ್ಹ ಎಂದು ಹೇಳಿದ್ದಾರೆ.

ಸಚಿತಾ ರೈ ಉದ್ಯೋಗ ಭರವಸೆ ಇತ್ತು ವಂಚಿಸಿದ ಏಳು ಪ್ರಕರಣಗಳು ದಾಖಲಾಗಿವೆ. ವಂಚನೆಗೊಳಗಾದ ಕೆಲವರು ದೂರು ಸಹಿತ ಪೋಲೀಸ್ ಠಾಣೆಗೆ ಹೋದರೂ ಪ್ರಕರಣ ದಾಖಲಿಸಲು ಪೋಲೀಸರೇ ಆಸಕ್ತಿ ವಹಿಸುತ್ತಿಲ್ಲವೆಂಬ ಆರೋಪಗಳಿಗೆ. ಇದು ಆಡಳಿತಾರೂಢ ಸಿಪಿಎಂ ನಾಯಕರ ಒತ್ತಾಸೆಯಿಂದಲೇ ನಡೆಯುವ ಪ್ರಕ್ರಿಯೆಯಾಗಿದೆ. ಕಾಸರಗೋಡು ತಾಲೂಕಿನ ಗ್ರಾಮೀಣ ಮುಗ್ಧರನ್ನು ವಂಚಿಸಿ ಲಕ್ಷಲಕ್ಷ ರೂ ಕಬಳಿಸಿದ ಆರೋಪಿಯನ್ನು ಕೂಡಲೇ ಬಂಧಿಸಿ, ವಂಚನಾ ಜಾಲ ಬಯಲಿಗೆಳೆಯಬೇಕು. ಅದಲ್ಲದಿದ್ದರೆ ವಂಚನೆಗೊಳಗಾದವರು ಮತ್ತು ಅವರ ಕುಟುಂಬವನ್ನು ಸೇರಿಸಿ ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠರ ಕಛೇರಿಗೆ ಬಿಜೆಪಿ ಮುತ್ತಿಗೆ ಹಾಕುವುದಾಗಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00