21
ಕಾಸರಗೋಡು: ಕಾಸರಗೋಡು ಐ ಎಂ ಎ ನಗರ ಘಟಕದ ನೂತನ ಪದಾಧಿಕಾರಿಗಳ ಸ್ಥಾನಾರೋಹಣ ಸಮಾರಂಭ ಮತ್ತು ನಗರ ಘಟಕದ ವೈದ್ಯರ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.
ಐ ಎಂ ಎ ಕೇರಳ ರಾಜ್ಯ ಕಾರ್ಯದರ್ಶಿ ಡಾ. ಕೆ. ಶಶಿಧರನ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡು ಘಟಕ ಅಧ್ಯಕ್ಷ ಡಾ. ಜಿತೇಂದ್ರ ರೈ ಅಧ್ಯಕ್ಷತೆ ವಹಿಸಿದರು. ಐ ಎಂ ಎ ಕಾಸರಗೋಡು ಜಿಲ್ಲಾ ಸಂಚಾಲಕ ಡಾ. ನಾರಾಯಣ ನಾಯ್ಕ್, ಡಾ. ಪ್ರಜ್ಯೋತ್ ಶೆಟ್ಟಿ, ಡಾ. ಟಿ. ಖಾಸಿಂ, ಡಾ ಮಾಯಾ ಮಲ್ಯ, ಡಾ. ರೇಖಾ ರೈ, ಡಾ. ಗಣೇಶ್ ಮಯ್ಯ, ಡಾ. ಬಿ. ಎಸ್ ರಾವ್, ಡಾ. ಅನಂತಕಾಮತ್ ಮೊದಲಾದವರು ಮಾತನಾಡಿದರು.
ನಗರ ಘಟಕದ ನೂತನ ಪದಾಧಿಕಾರಿಗಳಾದ ಡಾ. ಹರಿಕಿರಣ್ ಬಂಗೇರ( ಅಧ್ಯಕ್ಷ), ಡಾ. ಅಣ್ಣಪ್ಪ ಕಾಮತ್ (ಕಾರ್ಯದರ್ಶಿ), ಡಾ. ಎಸ್. ಅನೂಪ್ (ಖಜಾಂಚಿ) ಇವರು ಸ್ಥಾನಾರೋಹಣ ಗೈದರು.