ಕಣಿಪುರ ಸುದ್ದಿಜಾಲ (ಅ. 20)
ವಯನಾಡು : ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋದರಿ, ನೆಹರೂ ಕುಟುಂಬದ ವಂಶವಲ್ಲರಿ ಪ್ರಿಯಾಕಾ ವಾದ್ರಾ ರಾಜಕೀಯಕ್ಕೆ ಕಾಲೂರಿ ಚೊಚ್ಚಲ ಚುನಾವಣೆಯನ್ನು ಕೇರಳದ ವಯನಾಡಿನಲ್ಲಿ ಎದುರಿಸುವಾಗ, ರಾಷ್ಟ್ರೀಯ ಮಟ್ಟದಲ್ಲೇ ಕೂತೂಹಲ ಕೆರಳಿಸಿದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿದ ಅಭ್ಯರ್ಥಿ ನವ್ಯಾ ಹರಿದಾಸ್ ನಿಜಕ್ಕೂ ಯಾರು..?? ಆಕೆಯ ರಾಜಕೀಯ ಸಾಮರ್ಥ್ಯ ಏನು..??
ದೇಶಾದ್ಯಂತ ಈ ಕುತೂಹಲ ಮೂಡಿದೆ, ಲಕ್ಷಾಂತರ ಜನ ಜಾಲತಾಣದಲ್ಲಿ ನವ್ಯಾ ಹರಿದಾಸ್ ಯಾರೆಂದು ಹುಡುಕಾಡಿದ್ದಾರೆ. ಈ ಮೂಲಕ ಕಲ್ಲಿಕೋಟೆ ಮಹಾನಗರದಲ್ಲಿ ಬಿಜೆಪಿಗೆ ಸ್ಥಾನಮಾನದ ಗೌರವ ತಂದಿತ್ತ ಕಾರ್ಯಕರ್ತೆಗೆ ರಾಷ್ಟ್ರೀಯ ಮನ್ನಣೆ ಸಿಕ್ಕಂತಾಗಿದೆ.
ನಿಜಕ್ಕೂ ಯಾರೀ ರಮ್ಯಾ ಹರಿದಾಸ್? ಹೆಚ್ಚಿನವರಿಗೂ ಗೊತ್ತಿಲ್ಲದ ಹೆಸರಿದು.
ಮಾಜಿ ಪ್ರಧಾನಿ ದಿ. ರಾಜೀವಗಾಂಧಿ ಮಗಳು, ಕಾಂಗ್ರೆಸ್ ನಾಯಕ ಕುಟುಂಬದ ಪ್ರಿಯಾಂಕ ಗಾಂಧಿಯನ್ನು ವಯನಾಡಿನಲ್ಲಿ ಎದುರಿಸಲು ಬಿಜೆಪಿ ನಿಯೋಗಿಸಿದ ಈ ಅಭ್ಯರ್ಥಿ ಯಾರು? ದೇಶವ್ಯಾಪಕ ಈಗ ಇದೇ ಕುತೂಹಲ.,ಕೌತುಕ.
ಕಲ್ಲಿಕೋಟೆ (ಕೋಝಿಕ್ಕೋಡ್)
ಕಾರ್ಪೋರೇಷನಿನಲ್ಲಿ ಸ್ಪರ್ಧಿಸುವುದಕ್ಕಾಗಿಯೇ 2015ರಲ್ಲಿ ಪ್ರತಿಷ್ಠಿತ ವೇತನ ಸಿಗುತ್ತಿದ್ದ ಸಾಫ್ಟ್‌ವೇರ್ ಉದ್ಯೋಗ ತೊರೆದು ರಾಜಕೀಯಕ್ಕಿಳಿದ ಈಕೆ ಈಗ ವಯನಾಡಿನ ಪ್ರತಿಷ್ಠಿತ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ವಿರುದ್ಧ ಅಭ್ಯರ್ಥಿಯಾಗಬೇಕಿದ್ದರೆ ನಿಜಕ್ಕೂ ಆಕೆಯ ಸಾಧನೆಯ ಅರ್ಹತೆಗಳೇನು??
ಕಲ್ಲಿಕೋಟೆ ಮಹಾನಗರಪಾಲಿಕೆಯಲ್ಲಿ 10ವರ್ಷ ಹಿಂದಿನ ವರೆಗೆ ಬಿಜೆಪಿಗೆ ಜನಪ್ರತಿನಿಧಿಯೇ ಇರಲಿಲ್ಲ. ಅಲ್ಲಿನ ವಾರ್ಡೊಂದರಲ್ಲಿ ಒಮ್ಮೆಯಲ್ಲ ಸತತ ಎರಡು ಬಾರಿ ಗೆದ್ದು ಬೀಗಿದ ನವ್ಯಾ ಹರಿದಾಸ್ ಕೋಝಿಕ್ಕೋಡ್ ಮಹಾನಗರಪಾಲಿಕೆಯಲ್ಲಿ ಪಕ್ಷದ ಬುನಾದಿ ಗಟ್ಟಿಗೊಳಿಸಿದವರು. ಚುನಾವಣೆಯಿಂದ ಚುನಾವಣೆಗೆ ಪಕ್ಷಕ್ಕೆ ಮತ ಹೆಚ್ಚಿಸಿದವಳು. ಪ್ರಸ್ತುತ ಮಹಿಳಾ ಮೋರ್ಛಾ ರಾಜ್ಯ ಕಾರ್ಯದರ್ಶಿಯಾಗಿರುವ ಇವರು ಬಿಜೆಪಿ ಕೋಝಿಕ್ಕೋಡ್ ಜಿಲ್ಲಾ ನಾಯಕಿಯೂ ಹೌದು. ಪಕ್ಷಕ್ಕಾಗಿ ಸಮರ್ಪಣಾ ಭಾವದ ಪೂರ್ಣಾವಧಿ ಕಾರ್ಯಕರ್ತೆಯಾದ ಈಕೆ ಪ್ರಾಥಮಿಕ ತರಗತಿಯಿಂದಲೇ ಬಾಲಗೋಕುಲದ ಮೂಲಕ ಬೆಳೆದವರು. ಬಳಿಕ ಭಗಿನಿ ಪ್ರಮುಖ್ ಆಗಿಯೂ ದುಡಿದವರು. ಈ ಹಿನ್ನೆಲೆಯ ಕಾರಣದಿಂದಲೇ ಪ್ರಿಯಾಂಕಾ ಗಾಂಧಿಯಂತಹ ರಾಷ್ಟ್ರೀಯ ಮಹತ್ವದ ಅಭ್ಯರ್ಥಿ ಯ ಮುಂದೆ ಪಕ್ಷ ಸಂಘಪುತ್ರಿಯನ್ನು ಕಣಕ್ಕಿಳಿಸಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೋಝಿಕ್ಕೋಡ್ ಸೌತ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ 21ಶೇಕಡಾ ಮತ ಫಡೆದಿದ್ದ ನವ್ಯಾ ಹರಿದಾಸ್ ಈಗ ಮೊದಲ ಬಾರಿಗೆ, ಮೊದಲ ಬಾರಿಯ ಚುನಾವಣೆಯನ್ನು ಎದುರಿಸುತ್ತಿರುವ ಪ್ರಿಯಾಂಕಾಳಿಗೆ ಬಿ. ಜೆ. ಪಿ. ಯ ಎದುರಾಳಿ. ಇಲ್ಲಿ ಫಲಿತಾಂಶ ಬುಡಮೇಲಾದರೆ ನವ್ಯಾ ಹರಿದಾಸ್ ಬಿಜೆಪಿಯ ರಾಷ್ಟ್ರೀಯ ಮುಖವಾಗುವದರಲ್ಲಿ ಶಂಕೆಯಿಲ್ಲ. ಕಳೆದ ಬಾರಿಗಿಂತ ಮತ ಗಳಿಕೆ ಹೆಚ್ಚಿಸಿದರೂ ವರ್ಚಸ್ಸು ಹೆಚ್ಚಾಗುವುದು ನಿಶ್ಚಿತ. ಒಟ್ಟಂದದಲ್ಲಿ ಪ್ರಿಯಾಂಕ ವಿರುದ್ದ ಬಿಜೆಪಿ ಕೇರಳದ ಎಳೆಯ ಕಾರ್ಯಕರ್ತೆಯನ್ನು ಅಭ್ಯರ್ಥಿ ಯನ್ನಾಗಿಸಿದೆ ಎಂದರೆ ಇದರರ್ಥ ನಿರ್ಲಕ್ಷ್ಯ ಎಂದಲ್ಲ, ಪಕ್ಷದ ಭಾವೀ ನಾಯಕತ್ವವನ್ನು ರೂಪಿಸುತ್ತಿದೆ ಎಂದಲ್ಲವೇ??