ಶಿವ ಪಂಚಾಕ್ಷರಿ ಜಪಲಿಪಿ ಯಜ್ಞ ಪುಸ್ತಕದ ದ್ವಿತೀಯ ಆವೃತ್ತಿಯ ಬಿಡುಗಡೆ :

ಏತಡ್ಕ ಸದಾಶಿವ ದೇಗುಲದಲ್ಲಿ ಬಾಲಾಲಯ ಪ್ರತಿಷ್ಠೆ

by Narayan Chambaltimar

 

ಏತಡ್ಕ: ” ನಾಡಿನ ಭಕ್ತಾದಿಗಳೆಲ್ಲರೂ ಒಂದಾಗುವ ಅದ್ಭುತ ಕ್ಷಣವೆಂದರೆ ಆ ಊರಿನ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶೋತ್ಸವಗಳು.ತನು ಮನ ಧನದ ಭಾವ ಬಂಧದ ಮೂಲಕ ಭಗವದ್ಭಕ್ತರು ಸೇವಾ ಕೈಂಕರ್ಯಗಳಿಂದ ಕಾಯಕದಲ್ಲಿ ತೊಡಗಬೇಕು.ಆಗ ಊರಿನ ಶ್ರೇಯಸ್ಸು, ಅಭಿವೃದ್ಧಿ ನೆಲೆಗೊಳ್ಳುತ್ತದೆ ” ಎಂದು ಏತಡ್ಕ ಸದಾಶಿವ ದೇವಾಲಯದಬ್ರಹ್ಮಕಲಶದದಂಗವಾಗಿ ದೇವರ ಬಾಲಾಲಯ ಪ್ರತಿಷ್ಠೆ ಯ ವೇಳೆ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬದಿಯಡ್ಕದ ಉದ್ಯಮಿ ಎಸ್.ಎನ್.ಮಯ್ಯ ಶಿವ ಪಂಚಾಕ್ಷರಿ ಜಪಲಿಪಿ ಯಜ್ಞ ಪುಸ್ತಕದ ದ್ವಿತೀಯ ಆವೃತ್ತಿಯನ್ನು ಬಿಡುಗಡೆಗೊಳಿಸಿ ನುಡಿದರು. ಸ್ವಾಗತ ಸಮಿತಿ ಸದಸ್ಯೆ ಗೀತಾ ಎಂ ಭಟ್ ಬದಿಯಡ್ಕ ಮೊದಲ ಪ್ರತಿಯನ್ನು ಸ್ವೀಕರಿಸಿದರು.

ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ವೈ.ಸುಬ್ರಾಯ ಭಟ್ ಸಭಾಧ್ಯಕ್ಷ ತೆವಹಿಸಿದ್ದರು. ಉಪ ಗೌರವಾಧ್ಯಕ್ಷ ವೈ.ಶಂಕರ ಭಟ್ , ಉಪಾಧ್ಯಕ್ಷ ಪತ್ತಡ್ಕ ಗಣಪತಿ ಭಟ್, ಉಷಾ ಶಾಮ ಭಟ್ಟರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.
ಜನಪ್ರಿಯ ವೈದ್ಯ ಡಾ .ಮೋಹನಕುಮಾರ ವೈ.ಯಸ್ ” ಈ ಬ್ರಹ್ಮ ಕಲಶೋತ್ಸವದ ಕಾರ್ಯಚಟುವಟಿಕೆಗಳು ಸಮರ್ಪಕವಾಗಿ ಮೂಡಿ ಬರುತ್ತಾ ಇದೆ. ಭಗವದ್ಭಕತ್ತರ ಸಹಕಾರ ಇನ್ನಷ್ಟು ಬರಲೆಂದು ಹರ್ಷ ವ್ಯಕ್ತಪಡಿಸಿದರು.”

ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದ ನಂತರ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ದೇವರುಗಳನ್ನು ಬಾಲಾಲಯದಲ್ಲಿ ಸ್ಥಾಪಿಸಲಾಯಿತು.” ನಮ್ಮ ದೇವರು , ನಮ್ಮ ದೇವರೆನ್ನುವ ತುಡಿತ ಮತ್ತು ಶಕ್ತಿ , ಚೈತನ್ಯ, ಸ್ಫೂರ್ತಿ ಎನ್ನುವ ದುಡಿತದಿಂದ ನವೀಕರಣ, ಅಷ್ಟ ಬಂಧ ಬ್ರಹ್ಮಕಲಶೋತ್ಸವವು ಸಾಂಗವಾಗಿ ನೆರವೇರಲಿದೆ” ಎಂಬುದಾಗಿ ಸಂಕಲ್ಪ ನುಡಿ ಯಲ್ಲಿ ಅನುಗ್ರಹ ಮಾತುಗಳನ್ನಾಡಿದರು.ನೂರಾರು ಭಕ್ತರು ನೆರೆದಿದ್ದು ಈ ಅಪರೂಪದ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿ ಸಹಕರಿಸಿದರು.
ಆರಂಭದಲ್ಲಿ ಶ್ರೀಮತಿ ಗೀತಾ ಎಂ ಭಟ್ ಬದಿಯಡ್ಕ ಪ್ರಾರ್ಥನೆಗೈದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶ್ಯಾಮ ಭಟ್ಟರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮಿತಿಯ ಸಂಯೋಜಕ ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.ಇನ್ನೋರ್ವ ಸಂಯೋಜಕ ಡಾ.ವೈ . ವಿ. ಕೃಷ್ಣ ಮೂರ್ತಿ ಧನ್ಯವಾದವಿತ್ತರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00