ತಿರುವನಂತಪುರ:(ಅ.19)
ಹೆಚ್ಚುತ್ತಿರುವ ಪರಿಸರ ಮಲಿನೀಕರಣ ತಡೆಯುವ ನಿಟ್ಟಿನಲ್ಲಿ ದೀಪಾವಳಿ ಮತ್ತು ಹೊಸವರ್ಷಾಚರಣೆ ವೇಳೆಗಳ ಪಟಾಕಿ ಸಿಡಿಸುವುದಕ್ಕೆ ಕೇರಳ ಸರಕಾರವೂ ನಿಯಂತ್ರಣ ಹೇರಿದೆ. ಕೇಂದ್ರ ಹಸಿರು ಟ್ರಿಬ್ಯೂನಲ್ ಮಂಡಳಿ ನಿರ್ದೇಶಾನುಸಾರ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ನಿಯಂತ್ರಣ ನಿರ್ಧಾರ ಕೈಗೊಂಡು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಈ ಕುರಿತಾದ ಆದೇಶ ನೀಡಿದ್ದಾರೆ.
ಅಂತರಿಕ್ಷ ಮಲಿನೀಕರಣ ತಡೆಯುವುದರಂಗವಾಗಿ ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿ ಬಳಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ದೀಪಾವಳಿಗೆ ರಾತ್ರಿ 8ರಿಂದ 10ರ ತನಕ ಮತ್ತು ಕ್ರಿಸ್ಮಸ್, ಹೊಸವರ್ಷಾಚರಣೆಗೆ ರಾತ್ರಿ 11.55ರಿಂದ 12.30ರ ತನಕ ಪಟಾಕಿ ಸಿಡಿಸಲು ಸಮಾಯವಕಾಶ ನೀಡಿದೆ.ಸಾರ್ವಜನಿಕ ವಾತಾವರಣ ಮಲಿನಮಯವಾಗುತ್ತಿರುವುದು ಮನಗಂಡು ಈ ನಿಯಂತ್ರಣ ಹೇರಿರುವುದಾಗಿ ಹೇಳಲಾಗಿದೆ.
ಏನಿದು ಹಸಿರು ಪಟಾಕಿ?
ಹಸಿರು ಪಟಾಕಿ ಎಂದರೆ ಹಸಿರು ಬಣ್ಣದ ಕವಚ ಹೊಂದಿದ್ದಲ್ಲ. ಭಾರೀ ಶಬ್ದ ಮತ್ತು ಹೊಗೆ ಮಲಿನೀಕರಣಗಳಿಲ್ಲದ ಸಿಡಿದಾಗ ಶಬ್ದ ರಹಿತವಾದ ಪಟಾಕಿಗಳೆಂದರ್ಥ. ಇದು ಪರಿಸರಕ್ಕೆ ಕಡಿಮೆ ಮಾಲಿನ್ಯಕಾರಕವಾಗಿದೆ.
ದೇಶದ ಮಹಾನಗರ ಪರಿಸರಗಳು ಅಂತರಿಕ್ಷ ಮಲಿನೀಕರಣಕ್ಕೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ ಶಬ್ದ ರಹಿತ, ಭಾರೀ ರಸಾಯನಿಕದ ಹೊಗೆ ರಹಿತ ಪಟಾಕಿಗಳನ್ನು ಪರಿಹರ ಪೂರಕ ಹಸಿರು ಪಟಾಕಿಗಳೆಂದು ಗುರುತಿಸಲಾಗಿದೆ.