53
ಕಾಸರಗೋಡು( ಅ. 19)
ಮಲಯಾಳಂ ಟಿ. ವಿ. ಸೀರಿಯಲ್ ನಟಿಯೊಬ್ಬಳನ್ನು ಮಾದಕವಸ್ತು ಎಂಡಿಎಂಎ ಸಹಿತ ಬಂಧಿಸಲಾಗಿದೆ. ಕೆಲವು ಮಲಯಾಳಂ ಕಿರುತೆರೆ ಧಾರಾವಾಹಿ ಗಳಲ್ಲಿ ನಟಿಸಿರುವ ಷಂನತ್ತ್ ಯಾನೆ ಪಾರ್ವತಿ (35)ಎಂಬಾಕೆಯನ್ನು
ಕೊಲ್ಲಂ ಪರವೂರಿನ ಮನೆಯಿಂದ ಪೋಲೀಸರು ಬಂಧಿಸಿದರು. ಇಲ್ಲಿಂದ 3ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.
ಈಕೆ ಡ್ರಗ್ಸ್ ವ್ಯಸನಿಯಾಗಿದ್ದು, ತನ್ನ ಖಾಸಗಿ ಬಳಕೆಗೆ ಎಂಡಿಎಂಎ ಕೈ ವಶ ಇರಿಸಕೊಂಡಿದ್ದಳೆಂದು ಪೋಲೀಸರು ತಿಳಿಸಿದ್ದಾರೆ.
ಮಲಯಾಳಂ ಸಿನಿಮ, ಸೀರಿಯಲ್ ರಂಗ ಮಾದಕ ವಸ್ತು ಜಾಲದ ಹಿಡಿತದಲ್ಲಿದೆಯೆಂದೂ, ಕೆಲವು ಕಲಾವಿದರು, ತಂತ್ರಜ್ಞರು ಈ ಜಾಲದಲ್ಲಿ ಭಾಗಿಯಾಗಿದ್ದಾರೆಂದೂ ಆರೋಪಗಳಿರುವ ಹಿನ್ನೆಲೆಯಲ್ಲಿ ನಟಿಯನ್ನು ಹೆಚ್ಚುವರಿ ವಿಚಾರಣೆಗೆ ಒಳಪಡಿಸುವುದಾಗಿ ಪೋಲೀಸರು ತಿಳಿಸಿದ್ದಾರೆ.