549
ಪೈವಳಿಕೆ: ಇಲ್ಲಿನ ಅಟ್ಟೆಗೋಳಿಯಲ್ಲಿ ಮುಂಜಾನೆ ಮಿನಿಟೆಂಪೋ ತಡೆದು ನಿಲ್ಲಿಸಿ, ಚಾಲಕನ ಕುತ್ತಿಗೆಗೆ ಚಾಕು ಜತೋರಿಸಿ ಬೆದರಿಕೆಯೊಡ್ಡಿ 1.64ಲಕ್ಷ ರೂ ದರೋಡೆಗೈದ ಬಗ್ಗೆ ದೂರಲಾಗಿದೆ.
ಪೈವಳಿಕೆ ನಿವಾಸಿ ಯೂಸುಫ್ ಎಂಬವರು ಈ ಸಂಬಂಧ ಮಂಜೇಶ್ವರ ಠಾಣೆಗೆ ದೂರು ನೀಡಿದ್ದು, ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಯೂಸುಫ್ ಮೀನು ಮಾರಾಟಗಾರನಾಗಿದ್ದು, ಮಂಗಳೂರು ಬಂದರಿಗೆ ಮೀನು ಖರೀದಿಸಲೆಂದು ಮುಂಜಾವ ಹೊರಟು ಅಟ್ಟೆಗೋಳಿ ತಲುಪಿದಾಗ ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಕತ್ತಿ ಕೊರಳಿಗೆ ಒತ್ತಿ, ಬೆದರಿಸಿ ವಾಹನದಲ್ಲಿದ್ದ ಹಣ ಕಸಿದು ಬೈಕಿನಲ್ಲಿ ಪರಾರಿಯಾಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೈವಳಿಕೆ-ಕೈಕಂಬ ನಡುವಣ ರಸ್ತೆಯ ಸಿಸಿ ಟಿ.ವಿ.ಗಳನ್ನು ಪೋಲೀಸರು ಅವಲಂಬಿಸಿ, ಆರೋಪಿಗಳ ಪತ್ತೆಗೆ ಕಾರ್ಯಾಚರಿಸುತ್ತಿದ್ದಾರೆ.