ಕಣಿಪುರ ಸುದ್ದಿಜಾಲ (ಅ.15)
ಕಾಸರಗೋಡು: ಮಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲೆಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವ ವಿದ್ಯಾರ್ಥಿನಿಯನ್ನು ರೈಲಿನಲ್ಲಿ ಆಕ್ರಮಿಸಿ ಮಾನಭಂಗಕ್ಕೆತ್ನಿಸಿದ ಯುವಕನನ್ನು ಕಾಸರಗೋಡಿನಲ್ಲಿ ಸಿನಿಮೀಯ ಮಾದರಿಯಲ್ಲಿ ಬಂಧಿಸಲಾಗಿದೆ.
ಬೆಳ್ಳೂರು ನಾಟೆಕಲ್ಲಿನ ಬಿಸ್ಮಿಲ್ಲಾ ಹೌಸಿನ ಬಾದುಷಾ (28)ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ವೆಸ್ಟ್ ಕೋಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂದು ಮುಂಜಾನೆ ಘಟನೆ ನಡೆದಿದೆ.
ಬೆಳಿಗ್ಗೆ 5ರ ವೇಳೆಗೆ ರೈಲಿನಲ್ಲಿದ್ದ ಮೆಡಿಕಲ್ ವಿದ್ಯಾರ್ಥಿನಿಯನ್ನು ಆಕ್ರಮಿಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದಾಗ ಆಕೆ ಬೊಬ್ಬಿಟ್ಟಳು. ಈ ವೇಳೆ ಸಹಪ್ರಯಾಣಿಕರು ಸೇರಿ, ರೈಲ್ವೇ ಪೋಲೀಸರಿಗೆ ತಿಳಿಸಿದರು. ಈ ತನ್ಮಧ್ಯೆ ಭೋಗಿ ಬದಲಾಯಿಸಿ ಪ್ರಯಾಣಿಸಿದ ಆರೋಪಿಯನ್ನು ಕಾಸರಗೋಡಿನಿಂದ ರೈಲ್ವೇ ಪೋಲೀಸರು ಸೆರೆ ಹಿಡಿದರೂ, ಆತ ಜಾರಿ ತಪ್ಪಿಸಿಕೊಂಡು ಪಲಾಯನಗೈದನು. ಈ ವೇಳೆ ಪೋಲೀಸರು ಕೂಡಾ ಬೆಂಬಿಡದೇ ಬೆನ್ನಟ್ಟಿದರು. ಕೊನೆಗೂ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಲಾಯಿತು.