ಏತಡ್ಕ:
ಶಿವಳ್ಳಿ ಬ್ರಾಹ್ಮಣ ಸಮಾಜ ಏತಡ್ಕ ವಲಯದವರಿಂದ ಮುನಿಯೂರು ಹರಿನಾರಾಯಣ ನಡುವಂತಿಲ್ಲಾಯರ ಮನೆಯಲ್ಲಿ ಡಾ.ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು
ಶಿವಳ್ಳಿ ಬ್ರಾಹ್ಮಣ ಸಮಾಜ ಕೇಂದ್ರಸಮಿತಿ ರಕ್ಷಾಧಿಕಾರಿ ಸೀತಾರಾಮ ಕುಂಜತ್ತಾಯರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಪು.ವೆಂ. ಪುಣಿಂಚತ್ತಾಯರು ಸಂಶೋಧಕನಾಗಿ, ಸಾಹಿತಿಯಾಗಿ ನಾಡಿಗೆ ನೀಡಿದ ಕೊಡುಗೆ, ಸಾಧನೆಗೆ ಸಮಾಜ ಮನ್ನಣೆ ನೀಡಬೇಕು ಎಂದರು. ಮುಖ್ಯ ಅತಿಥಿಯಾಗಿ ಮುನಿಯೂರು ಶ್ರೀದರ ನಡುವಂತಿಲ್ಲಾಯ, ಕವಿ ವಿಜಯರಾಜ ಪುಣಿಂಚತ್ತಾಯ, ಶಿವಳ್ಳಿ ಬ್ರಾಹ್ಮಣ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ , ಪ್ರಬಾವತಿ ಕೆದಿಲಾಯ ಉಪಸ್ಥಿತರಿದ್ದರು. ಕುಮಾರಿ ಅನಘ ಮತ್ತು ಆಶಿತ ಪ್ರಾರ್ಥನೆ ಮಾಡಿದರು.
ಈ ಸಂಧರ್ಭದಲ್ಲಿ ಪುಣಿಂಚತ್ತಾಯರು ಬರೆದ ತುಳು ಹಾಡನ್ನುಕೇಂದ್ರ ಸಮಿತಿ ಉಪಾಧ್ಯಕ್ಷೆ ಸೀತಾರತ್ನ ಪುಣಿಂಚತ್ತಾಯ, ಪ್ರಬಾವತಿ ಕೆದಿಲಾಯ,ನಳಿನಿ ಅನಲತ್ತಾಯ,ಕೇಂದ್ರ ಸಮಿತಿ ಕೋಶಾಧಿಕಾರಿ ಸೀಮಾ ಬಳ್ಳುಳಾಯ ಹಾಡಿದರು. ಶಿವಳ್ಳಿ ಬ್ರಾಹ್ಮಣ ಸಮಾಜ ಕೋಶಾಧಿಕಾರಿ ಪಾರ್ವತಿ ಕುಂಜತ್ತಾಯ ನಿರೂಪಣೆ ಮಾಡಿದರು. ಹರಿನಾರಾಯಣ ನಡುವಂತಿಲ್ಲಾಯ ಸ್ವಾಗತಿಸಿ , ಗೀತಾ ಕುಂಜತ್ತಾಯ ಧನ್ಯವಾದವಿತ್ತರು.