59
Kanipura news network
ಕೊಚ್ಚಿ: ಮಾಜಿ ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿನಿಮಾ ನಟ ಬಾಲ ಅವರನ್ನು ಇಂದು ಮುಂಜಾನೆ ಕೊಚ್ಚಿ ಕಡವಂದ್ರ ಪೋಲೀಸರು ಠಾಣೆಗೆ ಕರೆದೊಯ್ದು ಬಂಧಿಸಿದ್ದಾರೆ.
ನಟನ ಮೊದಲ ಪತ್ನಿ, ಮಲಯಾಳಂ ಗಾಯಕಿ ಅಮೃತಾ ಸುರೇಶ್ ನೀಡಿದ ದೂರಿನಂತೆ ಬಂಧನ ದಾಖಲಿಸಲಾಗಿದೆ.
ನಟ ಬಾಲ ತನ್ನ ಮತ್ತು ಅಪ್ರಾಪ್ತ ಮಗುವನ್ನು ಉಲ್ಲೇಖಿಸಿ ಸೋಷ್ಯಲ್ ಮೀಡಿಯಾದಲ್ಲಿ ಅಪಕೀರ್ತಿಯನ್ನುಂಟುಮಾಡುವ ಅವಮಾನಿತ ವಿಷಯಗಳನ್ನು ಹಂಚಿರುವುದಾಗಿ ಆರೋಪಿಸಿ ಗಾಯಕಿ ಅಮೃತಾ ಸುರೇಶ್ ದೂರು ದಾಖಲಿಸಿದ್ದಾರೆ.
ಇದರಂತೆ ಕಡವಂದ್ರ ಪೋಲೀಸರು ನಟ ಬಾಲನನ್ನು ಮನೆಯಿಂದ ಠಾಣೆಗೆ ಕರೆದೊಯ್ದು ಬಂಧನ ದಾಖಲಿಸಿದ್ದಾರೆ. ದಂಪತಿಗಳೀರ್ವರು ಪರಸ್ಪರ ಬೇರ್ಪಟ್ಟು ವಾಸಿಸುತಿದ್ದು, ರಿಯಾಲಿಟಿ ಷೋ ಸಂದರ್ಭದಲ್ಲಿ ಪ್ರೇಮಾಂಕುರವಾಗಿ ವಿವಾಹಿತರಾಗಿದ್ದರು.